ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 229 ಮಂದಿಯಲ್ಲಿ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 8878 ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ ಪ್ರಕರಣಗಳ ಪೈಕಿ ಮಂಗಳೂರಿನಲ್ಲಿ 122, ಬಂಟ್ವಾಳದಲ್ಲಿ 36, ಬೆಳ್ತಂಗಡಿಯಲ್ಲಿ 8, ಪುತ್ತೂರಿನಲ್ಲಿ 31, ಸುಳ್ಯದಲ್ಲಿ ಒಬ್ಬರಿಗೆ ಹಾಗೂ ಇತರೆ ಜಿಲ್ಲೆಯ 31 ಮಂದಿಗೆ ಕೋವಿಡ್ ಕೇಸ್ ದೃಢಪಟ್ಟಿದೆ.
ಇಂದಿನ ಪ್ರಕರಣಗಳಲ್ಲಿ 123 ಐಎಲ್‌ಎ, 6 ಎಸ್‌ಎಆರ್‌ಐ ಪ್ರಕರಣಗಳಾಗಿದ್ದು, 22 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನುಳಿದ 78 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಜಿಲ್ಲೆಯಲ್ಲಿ ಇಂದು 128 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 6445 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ 7 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ 269 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ 2164 ಸಕ್ರೀಯ ಪ್ರಕರಣಗಳಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here