ವಿಟ್ಲ: ಗಿರಾಕಿಯ ಸೋಗಿನಲ್ಲಿ ಬಂದು ಅಂಗಡಿ ಮಾಲಕರನ್ನು ಯಾಮಾರಿಸಿ ನಗದು ದೋಚಿದ ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ಕೆ. ಎಸ್. ಅವರ ತಂಡ ಯಶಸ್ವಿಯಾಗಿದೆ.

ಉಪ್ಪಿನಂಗಡಿ ನೆಜಿಗಾರು ಅಂಬೊಟ್ಟು ನಿವಾಸಿ ಶಾಫಿ ಯಾನೆ ಮಹಮ್ಮದ್ ಶಾಫಿ (27) ಬಂಧಿತ ಆರೋಪಿ.

ಕಾಸರಗೋಡು ಮೂಲದ ಇನ್ನೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕುದ್ದುಪದವು ನಿವಾಸಿ ಶ್ರೀಧರ್ ರೈ ಎಂಬವರಿಗೆ ಸೇರಿದ ದಿನಸಿ ಅಂಗಡಿಯನ್ನು ಗಮನಿಸಿದ ತಂಡ ಪಾಯಸ್ತರೆಂಬ ಕಾರಣಕ್ಕೆ ಪಶು ಆಹಾರವನ್ನು ಕೇಳಿಕೊಂಡು ಗಿರಾಕಿಯ ಸೋಗಿನಲ್ಲಿ ಆಗಮಿಸಿದ ಶಾಫಿ ಮಾಲೀಕರು ಚಿಲ್ಲರೆ ನೀಡುವ ಸಮಯದಲ್ಲಿ ಅವರನ್ನು ಯಾಮಾರಿಸಿ ಸುಮಾರು ೩೩ಸಾವಿರ ದೋಚಿದ್ದ ಪರಾರಿಯಾಗಿದ್ದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಘಟನೆಯಲ್ಲಿ ಆರೋಪಿತ ಕೇಸರಿ ಬಣ್ಣದ ಅಂಗಿ ಧರಿಸಿ ರಿಕ್ಷಾದಲ್ಲಿ ಆಗಮಿಸಿದ್ದು, ಪೊಲೀಸ್ ತನಿಖೆಯ ಹಾದಿ ತಪ್ಪಿಸಿತ್ತಾದರೂ, ಪೊಲೀಸರ ಆರೋಪಿಯನ್ನು ಉಪ್ಪಿನಂಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ, ಮಂಗಳೂರಿನಲ್ಲಿ ಒಂದು ಹಾಗೂ ಬೆಳ್ತಂಗಡಿಯಲ್ಲಿ 6 ಕಳ್ಳತನ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯ ಸಂದರ್ಭ ಬಾಯಿ ಬಿಟ್ಟಿದ್ದಾನೆನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here