Wednesday, October 18, 2023

ಶಿರ್ಲಾಲು ಮತ್ತು ಕರಂಬಾರು ಉತ್ಸಾಹಿ ಯುವಕರ ಹಸಿವು ಮುಕ್ತ ವಾಟ್ಸ್ ಆಪ್ ತಂಡದಿಂದ ಮಾದರಿ ಕಾರ್ಯ

Must read

ಬೆಳ್ತಂಗಡಿ: ತಾಲೂಕಿನ ಕರಂಬಾರು ಶಿರ್ಲಾಲು ಗ್ರಾಮದ ವ್ಯಾಪ್ತಿಯಲ್ಲಿ ಗ್ರಾಮದ ಬಿಟ್ ಪೊಲೀಸ್ ಅಭಿಜಿತ್ ಕುಮಾರ್ ಇವರ ಮಾರ್ಗದರ್ಶನ ದೊಂದಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರು ವಿಶ್ವನಾಥ ಬಂಗೇರ ಪ್ರಸಾದ್ ಕುಮಾರ್ ಶಿರ್ಲಾಲು ಮಾದವ ಶಿರ್ಲಾಲು ಹರೀಶ್ ಕಲ್ಲಾಜೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಇವರ ಒಂದು ಯೋಚನೆ ಯೋಜನೆಯ ರೂಪವಾಗಿ
ಹಸಿವು ಮುಕ್ತ ಗ್ರಾಮ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ರಚಿಸಿ ಊರ ದಾನಿಗಳ ನೆರವಿನಿಂದ ಶಿರ್ಲಾಲು ಕರಂಬಾರು ಗ್ರಾಮದಲ್ಲಿ ಕೊರೊನ ಎಂಬ ಮಹಾಮಾರಿ ರೋಗ ಬಂದ ಸಂದರ್ಭ 1ತಿಂಗಳ ಲಾಕ್ ಡೌನ್ ಸಂದರ್ಭದಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸುಮಾರು 450 ಬಡ ಕುಟುಂಬಗಳಿಗೆ 45ಕ್ವಿ. ಅಕ್ಕಿ ಹಾಗೂ ಉಪ್ಪಿನಕಾಯಿ ಡಬ್ಬವನ್ನು ಹಸ್ತಾಂತರ ಮಾಡಿದ್ದಲ್ಲದೆ ಅನಾರೋಗ್ಯ ಹಿನ್ನೆಲೆ ಇರುವ ಆರ್ಥಿಕ ಸ್ಥಿತಿ ಗತಿ ತೀರ ಬಡತನದಲ್ಲಿ ಇರುವ ಕುಟುಂಬಕ್ಕೆ ಧನ ಸಹಾಯ ಮಾಡಿದ್ದಾರೆ.

ಅನೇಕ ಸಾಮಾಜ ಸೇವೆಯಲ್ಲಿ ತೊಡಗುತ್ತಿರುವ ಈ ಗ್ರೂಪಿಗೆ ಊರಿನ ದಾನಿಗಳೇ ಅವರ ಆಸ್ತಿ ಎನ್ನುತ್ತಾರೆ ಗ್ರೂಪ್ ಅಡ್ಮಿನ್ ಅದಲ್ಲದೆ ಶಿರ್ಲಾಲು ಕರಂಬಾರು ಗ್ರಾಮದ ಕೊರೊನ ಸೋಂಕಿತ ವ್ಯಕ್ತಿಗಳ ಹೋಮ್ ಕ್ವಾರಂಟೆನ್ ಲ್ಲಿರುವ ಐಸೋಲೇಶನ್ ವ್ಯಕ್ತಿಗೆ ಟ್ರೆಂಪ್ರೆಚರ್ ಚೆಕ್ ಮಾಡುವ ಡಿಜಿಟಲ್ ಥರ್ಮ ಮೀಟರ್ ಅಗತ್ಯತ್ತೇ ಬಗ್ಗೆ ಅರೋಗ್ಯ ಕಾರ್ಯಕರ್ತೆಯರ ಬೇಡಿಕೆ ಮೇರೆಗೆ ಹಸಿವು ಮುಕ್ತ ವಾಟ್ಸಾಪ್ ಗ್ರೂಪಿನ ವತಿಯಿಂದ 10 ಡಿಜಿಟಲ್ ಟ್ರೆಂಪ್ರೆಚರ್ ಥರ್ಮ ಮೀಟರ್ ನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಸಿವು ಮುಕ್ತ ವಾಟ್ಸಾಪ್ ಗ್ರೂಪಿನಿಂದ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಟ್ ಪೊಲೀಸ್ ಅಭಿಜಿತ್ ಕುಮಾರ್
ಹಾಗೂ ಗ್ರೂಪ್ ಅಡ್ಮಿನ್ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

More articles

Latest article