



ಬಂಟ್ವಾಳ: ನಾವು ಜೀವಿಸುವ ಈ ಭೂಮಂಡದಲ್ಲಿ ಯಾರು ಶಾಶ್ವತವಲ್ಲ, ಒಂದಲ್ಲ ಒಂದು ದಿನ ಬಿಟ್ಟು ಹೋಗಲೇಬೇಕು ಈ ಪ್ರಪಂಚವನ್ನು. ಅದು ಅನಿವಾರ್ಯವೂ ಕೂಡ, ಆದರೆ ಬಿಟ್ಟು ಹೋಗಬೇಕಾದ ಈ ಸಮಾಜಕ್ಕೆ ನೀಡಬೇಕಾದದ್ದು ಬಹಳಷ್ಟು ಇದೆ. ನಾವು ನಮ್ಮ ಜೀವನದಲ್ಲಿ ಏನೇ ಗಳಿಸಿದ್ದರೂ ಇಲ್ಲಿ ಬಿಟ್ಟು ಹೋಗಲೇಬೇಕು. ಆದರೆ ಬಿಟ್ಟು ಹೋಗುವ ಮೊದಲು ನಾವು ಜೀವಿಸುವ ಸಮಾಜಕ್ಕೆ ಕಿಂಚಿತ್ತಾದರೂ ಏನಾದರೂ ನೀಡಬೇಕೆಂದು ಯುವ ಪಡೆಗಳು ಒಂದೇ ಕುಟುಂಬ ಎಂಬ ಭಾವನೆಯ ಅಡಿಯಲ್ಲಿ ಕಳೆದ 47 ತಿಂಗಳ ಹಿಂದೆ ಕಟೀಲು ಅಮ್ಮನ ಅನುಗ್ರಹದೊಂದಿಗೆ ಹುಟ್ಟಿಕೊಂಡ ಸಂಸ್ಥೆಯೇ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ದಕ್ಷಿಣ ಕನ್ನಡ.
ತನ್ನ ಯಶಸ್ವಿ 4 ವರ್ಷದ ಸೇವಾ ಪಯಣವನ್ನು ಪೂರೈಸಿ 5ನೇ ವರ್ಷದ ಸೇವಾ ಪಯಣಕ್ಕೆ ಪಾದಾರ್ಪಣೆ ಮಾಡಿದ್ದು, 4ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕಟೀಲು ಗೆ ಭೇಟಿ ನೀಡಿ, ಸ್ನೇಹದೀಪ್ HIV ಹೆಣ್ಣು ಮಕ್ಕಳ ಪಾಲನಾ ಕೇಂದ್ರ ಕೊಟ್ಟಾರ 1ನೇ ಅಡ್ಡ ರಸ್ತೆ ಕಾಪಿಕಾಡ್ ಬಿಜೈ ಮಂಗಳೂರು ಇಲ್ಲಿ ಅನ್ನದಾನಕ್ಕಾಗಿ ರೂ.15,000 ಚೆಕ್ ನ್ನು ಸ್ನೇಹದೀಪ್ ನ ಸ್ಥಾಪಕರಾದ ತಬಸ್ಸುಮ್ ಇವರಿಗೆ ಹಸ್ತಾಂತರಿಸಲಾಯಿತು.
ಈ ನಾಲ್ಕನೇ ವರ್ಷಾಚರಣೆ ಸಮಯದಲ್ಲಿ ಕಾಸರಗೋಡು ಬಾಡೂರು ಹೊಸಗದ್ದೆ ವತ್ಸಲಾ ದಿಲೀಪ್ ಕುಮಾರ್ ದಂಪತಿಗಳ 6 ತಿಂಗಳ ಪುತ್ರ ಹೃದಯ್ ಪಿತ್ತಜನಕಾಂಗದ* ಸಮಸ್ಯೆಯಿಂದ ಬಳಲುತ್ತಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು, ಆದರೆ ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಧನ ಸಹಾಯ ಹಸ್ತಾಂತರ ನೀಡದೆ ಅಡಚಣೆಯಾಗಿತ್ತು ಆದರೆ 4ನೇ ವರ್ಷಾಚರಣೆ ಸಮಯದಲ್ಲಿ ಸ್ನೇಹದೀಪ್ HIV ಪೀಡಿತ ಹೆಣ್ಣು ಮಕ್ಕಳ ಪಾಲನಾ ಕೇಂದ್ರ ಕೊಟ್ಟಾರ 1ನೇ ಅಡ್ಡ ರಸ್ತೆ ಕಾಪಿಕಾಡ್ ಬಿಜೈ ಮಂಗಳೂರು ಇಲ್ಲಿ ರೂ. 10,000 ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.






