



ಬಂಟ್ವಾಳ: ತಲಕಾವೇರಿಯಲ್ಲಿ ಕಳೆದ ವಾರ ಭೂಕುಸಿತದಿಂದ ನಾಪತ್ತೆ ಯಾಗಿದ್ದ ಬಂಟ್ವಾಳದ ಬ್ರಹ್ಮರಕೋಟ್ಲು ಕನಪಾಡಿ ನಿವಾಸಿ ರವಿಕಿರಣ್ ಅವರ ಮೃತದೇಹ ಹತ್ತುದಿನಗಳ ಬಳಿಕ ಇಂದು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕನಪಾಡಿ ನಿವಾಸಿ ರಾಮಕೃಷ್ಣ ಭಟ್ ಅವರ ಪುತ್ರ ರವಿಕಿರಣ್ (24) ಅವರ ಮೃತದೇಹ ಪತ್ತೆಯಾಗಿದೆ ಎಂದು ಮನೆಯವರಿಗೆ ದೂರವಾಣಿ ಕರೆ ಬಂದಿದೆ.
ದೂರವಾಣಿ ಕರೆಯಂತೆ ರವಿಕಿರಣ್ ಅವರ ಕುಟುಂಬ ಭಾಗಮಂಡಲಕ್ಕೆ ತೆರಳಿದ್ದು ಅಲ್ಲಿಯೇ ಅಂತ್ಯಸಂಸ್ಕಾರದ ಕಾರ್ಯ ಗಳು ನಡೆಯಲಿದೆ ಎಂದು ತಿಳಿದು ಬಂದಿದೆ.
ಹತ್ತು ದಿನಗಳ ಹಿಂದೆ ಮಳೆಗೆ ಭೂಕುಸಿತ ಉಂಟಾಗಿ ತಲಕಾವೇರಿಯಲ್ಲಿ ಪೂಜೆ ಮಾಡುತ್ತಿದ್ದ ಬ್ರಾಹ್ಮಣ ಕುಟುಂಬದ ಮನೆ ಕೊಚ್ಚಿ ಹೋಗಿತ್ತು.
ಮನೆಯಲ್ಲಿದ್ದ 5 ಮಂದಿ ನಾಪತ್ತೆಯಾಗಿದ್ದರು. ನಾಪತ್ತೆ ಯಾದವರಲ್ಲಿ ಒರ್ವ ಬಂಟ್ವಾಳ ತಾಲೂಕಿನ ಕನಪಾಡಿ ನಿವಾಸಿ ರವಿಕಿರಣ್.
ಅವರು ಎರಡು ವರ್ಷಗಳಿಂದ ತಲಕಾವೇರಿಯಲ್ಲಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಮಾಡುತ್ತಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ವಾಪಾಸು ಊರಿಗೆ ಬಂದಿದ್ದ ರವಿಕಿರಣ್ ಅವರು ಕೆಲದಿನಗಳ ಹಿಂದೆಯಷ್ಟೆ ಅವರು ವಾಪಾಸು ಹೋಗಿದ್ದರು. ವಿಧಿಯ ಆಟಕ್ಕೆ ರವಿಕಿರಣ್ ಬಲಿಯಾಗಿದ್ದಾರೆ.






