ವೀರಕಂಭ: ಸ್ವಾತಂತ್ರ್ಯ ದಿನಾಚರಣೆಯು ಭಾರತೀಯರ ಪಾಲಿಗೆ ಸಂಭ್ರಮದ ದಿನ. ನಮ್ಮ ದೇಶದ ಘನತೆಯನ್ನು ಎತ್ತಿ ಸಾರುವ ದಿನವಾಗಿದೆ. ನಾವಿಂದು ಅನುಭವಿಸುವ ಸಂತೋಷಗಳ ಹಿಂದೆ ಹಲವಾರು ಜನರ ತ್ಯಾಗ ಬಲಿದಾನವಿದೆ ಎಂದು ವೀರಕಂಭ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ಹೇಳಿದರು.

ಅವರು ಮಜಿ ವೀರಕಂಭ ದ.ಕ. ಜಿ.ಪಂ. ಹಿ. ಪ್ರಾ. ಶಾಲೆಯ 74ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶಮ೯ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here