ಧರ್ಮಸ್ಥಳ: ಪ್ರತೀಬಾರಿ ಸ್ವಾತಂತ್ರ್ಯ ದಿನಾಚರಣೆ ಬಂದಾಗಲೂ ಸಂಭ್ರಮದ ವಾತಾವರಣ ಶಾಲೆಯಲ್ಲಿರುತ್ತಿತ್ತು.ಆದರೆ ಈ ಬಾರಿ ಕೊರೊನಾ ಕಾರಣದಿಂದ ಮಕ್ಕಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತಾಯಿತು.

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ‌ಪಣಕ್ಕಿಟ್ಟ ವೀರರನ್ನು ನೆನೆಪಿಸಬೇಕಾದ ದಿನ ಅದು ಇಂದಿಗೆ ಉಳಿಯಬಾರದು ಅವರ ತ್ಯಾಗ ಬಲಿದಾನಗಳ ಫಲವಾಗಿ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ‌ ಎಂದು ಶ್ರೀ.ಧ.ಮಂ.ಆಂಗ್ಲಮಾಧ್ಯಮ.ಶಾಲೆ ಧರ್ಮಸ್ಥಳದಲ್ಲಿ ನಡೆದ ಸ್ವಾತಂತ್ರ್ಯ ದಿನಾ‍ಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಗೈದ ಅಲ್ಲಿನ ಸಂಚಾಲಕ ಅನಂತ ಪದ್ಮನಾಭ ಭಟ್.ಅವರು ನುಡಿದರು.

ಅವರ ಜೊತೆಗೆ ಪುಟಾಣಿ ಅತಿಥಿ ಹೆಗ್ಗಡೆ ವಂಶದ ಕುಡಿ ಶೀ.ಸುರೇಂದ್ರ ಕುಮಾರ್ ಅವರ ಪುತ್ರ ಆರ್ಯಮನ್ ಆಗಮಿಸಿದ್ದು, ನಾವೆಲ್ಲರೂ ಇಂದಿನ ಪುಟಾಣಿಗಳು ಆದರೆ ನಾಳಿನ ಪ್ರಜೆಗಳು.ಭವ್ಯ ಭಾರತದ ಮುಂದಿನ ಕನಸಿನ ಕೂಸುಗಳು.

ಈ ದೇಶದ ಉಜ್ವಲ ಮುಂದೆ ನಮ್ಮ ಕೈಲಿದೆ.ಹೀಗಾಗಿ ನಾವಲ್ಲರೂ ಅದನ್ನು ನನಸುಮಾಡುವ ಪಣತೊಡುತ್ತೇವೆ ಎಂದು ಅದೇ ಕನಸು ಕಂಗಳ ನೋಟದೊಂದಿಗೆ ಸುಂದರವಾಗಿ ಪುಟಾಣಿಯಾದರೂ ಪ್ರಭುದ್ದತೆಯಿಂದ ನುಡಿದರು.ಜಿಟಿ ಜಿಟಿ ಸುರಿವ ಮಳೆಯನ್ನೂ ಲೆಕ್ಕಿಸದೆ ಸರಿಯಾಗಿ 8.30 ಗಂಟೆಗೆ ಶಾಲಾ ಸಂಚಾಲಕರಾದ ಶೀಯುತ ಅನಂತಪದ್ಮನಾಭ ಭಟ್ ಹಾಗೂ ಪುಟಾಣಿ ಆರ್ಯಮನ್ ಜೊತೆಗೂಡಿ ಧ್ವಜಾರೋಹಣ ಗೈದರು.
ಶಾಲಾ ಶಿಕ್ಷಕವೃಂದ ರಾಷ್ಟ್ರಗೀತೆ,ಧ್ವಜಗೀತೆ,ವಂದೇಮಾತರಂ ಗೀತೆಯನ್ನು ಹಾಡಿ ದೇಶಕ್ಕೆ ನಮನ ಸಲ್ಲಿಸಿದರು.

ಕಾರ್ಯಕ್ರಮ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿ. ಅವರ ನೇತೃತ್ವದಲ್ಲಿ ನಡೆಯಿತು. ನಿಡ್ಲೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here