ಬಂಟ್ವಾಳ: ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕೋಮುವಾದಿ ಸಂಘಟನೆಗಳಾದ ಎಸ್.ಡಿ.ಪಿ.ಐ.ಕೆ.ಎಪ್.ಡಿ.ಸಂಘಟನೆಯನ್ನು ನಿಷೇಧ ಮಾಡಿ ಎಂದು ಸರಕಾರಕ್ಕೆ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡ ವತಿಯಿಂದ ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಮುಖ್ಯಮಂತ್ರಿಯವರಿಗೆ ಬಂಟ್ವಾಳ ತಹಶಿಲ್ದಾರರ ಮೂಲಕ ಮನವಿ ನೀಡಿದರು.


ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮಾತನಾಡಿ ಎಸ್.ಡಿ.ಪಿ.ಕೆ.ಎಪ್.ಡಿ.ಸಂಘಟನೆ ಯನ್ನು ನಿಷೇಧ ಮಾಡಬೇಕು , ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಅವರು ಹೇಳಿದರು.

ವಿಭಾಗ ಮಾತ್ರ ಸುರಕ್ಷಾ ಸಂಯೋಜಕ ಗಣರಾಜ್ ಭಟ್ ಮಾತನಾಡಿ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿಯ ಘಟನೆಯನ್ನು ನೋಡಿದಾಗ ಮಹಮ್ಮದ್ ಜಿನ್ನಾನ ಕನಸು ನನಸು ಮಾಡುವ ಸಂಚು ಕೆ.ಎಪ್.ಡಿ.ಎಸ್.ಡಿ.ಪಿ.ಯದ್ದು , ಈ ಘಟನೆ ಯ ಹಿಂದೆ ಹಿರುವ ಮಹಾಶಕ್ತಿಗಳನ್ನು ಸರಕಾರ ಶೀಘ್ರವಾಗಿ ಬಂಧಿಸಿಬೇಕು ಎಂದು ಅವರು ಒತ್ತಾಯಿಸಿದರು.


ಹಿಂದೂ ಮುಖಂಡ ರಾಜಾರಾಮ್ ಭಟ್ , ವಿಭಾಗ ಸಂಪರ್ಕ ಪ್ರಮುಖ ರತ್ನಾಕರ ಶೆಟ್ಟಿ, ಪ್ರಾಂತ ಕಾರ್ಯಕಾರಣಿ ಸದಸ್ಯ ರವಿರಾಜ್ ಬಂಟ್ವಾಳ, ನ್ಯಾಯ ಜಾಗರಣಾ ಜಿಲ್ಲಾ ಪ್ರಮುಖ್ ವಕೀಲರಾದ ರಾಜೇಶ್ ಬೊಳ್ಳುಕಲ್ಲು, ತಾಲೂಕು ಅಧ್ಯಕ್ಷ ತಿರುಲೇಶ್, ಹಿಂದೂ ಯುವವಾಹಿನಿ ಜಿಲ್ಲಾ ಸಂಯೋಜಕ ಪ್ರಶಾಂತ್ ಕೆಂಪುಗುಡ್ಡೆ, ನೇರಳಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ವಿಟ್ಲ ಪ್ರಖಂಡ ಅಧ್ಯಕ್ಷ ಯೋಗೀಶ್ ತುಂಬೆ ಕಾರ್ಯದರ್ಶಿ ಯೋಗೀಶ್ ತುಂಬೆ ಮತ್ತಿತರರು ಹಾಜರಿದ್ದರು.

ಅರುಣ್ ಸಜೀಪ ಸ್ವಾಗತಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here