ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ “ಅಖಂಡ ಭಾರತ ಸಂಕಲ್ಪ ದಿನ” ಕಾರ್ಯಕ್ರಮ ಬಿ.ಸಿ.ರೋಡಿನ ಶಿವಳ್ಳಿ ಸಭಾ ಭವನದಲ್ಲಿ ನಡೆಯಿತು.
ಭಾರತ ಮಾತಾ ಮಾತಪೂಜನಾ ಛಾಯಾಚಿತ್ರಕ್ಕೆ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಿಕ್ಸೂಚಿ ಭಾಷಣ ಮಾಡಿದ ಭಜರಂಗದಳ ಪ್ರಾಂತ ಸಂಚಾಲಕ ಕೆ.ಆರ್.ಸುನಿಲ್, ಹಿಂದೂ ಸಮಾಜದ ಮೇಲೆ ಮುಸ್ಲಿಂ ಸಮುದಾಯ ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದೆ, ಅದರ ಮುಂದುವರಿದ ಭಾಗವೇ ಬೆಂಗಳೂರು, ಮಂಗಳೂರು ದಾಳಿ ಪ್ರಕರಣ ಎಂದು ಅವರು ಹೇಳಿದರು. ಇದು ವ್ಯವಸ್ಥಿತ ಸಂಚು, ಇಂತಹ ದಾಳಿಯನ್ನು ನಡೆಸಿ ಮತಾಂತರ ಮಾಡುವ ಹುನ್ನಾರವನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸಂಘಟನೆಯ ನಿರಂತರವಾದ ಹೋರಾಟದ ಫಲವಾಗಿ ಅನೇಕ ವಿಚಾರಗಳು ಹಿಂದೂ ರಾಷ್ಟ್ರದ ಪುನರುತ್ಥಾನದ ಕಾರ್ಯಕ್ಕೆ ಪ್ರೇರಣೆಯಾಗಿದೆ.

ನಮ್ಮ ಧಾರ್ಮಿಕ ಭಾವನೆಗಳ ಮೇಲೆ, ಸಂಸ್ಕೃತಿಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಇದರ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಾದ ಸ್ಥಿತಿ ಹಿಂದೂ ರಾಷ್ಟ್ರದ ಹಿಂದೂಗಳಿಗೆ ಒದಗಿದೆ ಎಂಬುದು ಬೇಸರದ ಸಂಗತಿ
ಎಂದರು. ಸಂಘಟನೆ ನಿರಂತರವಾಗಿ ಸಮಾಜಕ್ಕೋಸ್ಕರ ಹಗಲಿರುಳು ಶ್ರಮಿಸುತ್ತಿದೆ.


ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು, ಸವಾಲುಗಳನ್ನು ಎದುರಿಸಿ ಭಾರತವನ್ನು ವಿಶ್ವಗುರು ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸು, ಅವರ ಸಂಕಲ್ಪಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ನೀಡೋಣ ಎಂದು ಅವರು ಹೇಳಿದರು. ‌
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ಆಶೋಕ್ ಶೆಟ್ಟಿ ಸರಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು.


ಜಿಲ್ಲಾ ಸಹ ಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ಪ್ರಖಂಡ ಸಂಚಾಲಕ ಶಿವಕುಮಾರ್ ತುಂಬೆ,
ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಪ್ರಸಾದ್ ರಾಮನಗರ, ಅಭಿನ್ ರೈ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here