ಬೆಂಗಳೂರು: ಕೆ.ಎಸ್.‌ಆರ್.‌ಟಿ.ಸಿ., ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ನೂತನವಾಗಿ ಪಾರ್ಸಲ್‌ ಹಾಗೂ ಕೊರಿಯರ್‌ ಸೇವೆಯನ್ನು ಆರಂಭಿಸುತ್ತಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ಕೆಎಸ್‌ಆರ್‌ಟಿಸಿ ರಾಜ್ಯ ಹಾಗೂ ಅಂತರ್ ರಾಜ್ಯ ಮಾರ್ಗವಾಗಿ ಈ ಕೊರಿಯರ್‌ ಹಾಗೂ ಪಾರ್ಸಲ್‌ ಸೇವೆ ಆರಂಭ ಮಾಡಿದ್ದು, ತನ್ನ ಈ ಹೊಸ ಯೋಜನೆಗೆ ಸಲಹೆ, ಸೂಚನೆ ನೀಡುವಂತೆ ಪ್ರಯಾಣಿಕರಲ್ಲಿ ವಿನಂತಿಸಿದೆ. ಆಗಸ್ಟ್‌ 15ರ ಸಂಜೆ 5 ಗಂಟೆಯೊಳಗೆ ಪ್ರಯಾಣಿಕರು ಸಲಹೆ, ಸೂಚನೆ ನೀಡಬಹುದಾಗಿದೆ. ಇನ್ನು ಬ್ರಾಂಡ್‌ ಹೆಸರು ಆಯ್ಕೆಯಾದ ಓರ್ವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಯಾವುದೇ ಮಾದರಿಯ ಬಸ್ಸಿನಲ್ಲಿ ತಮ್ಮ ಇಚ್ಛೆಯ ಒಂದು ಮಾರ್ಗವಾಗಿ ಉಚಿತ ಪ್ರಯಾಣಕ್ಕೆ ಟಿಕೆಟ್‌ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here