Sunday, October 22, 2023

ಅ.16: ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್ ಅವರ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭ

Must read

ವಿಟ್ಲ: 104 ವರ್ಷಗಳ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದರ ಲಯನ್ಸ್ ಜಿಲ್ಲೆಯ ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಈ ನಾಲ್ಕು ಕಂದಾಯ ಜಿಲ್ಲೆಗಳ ಜಿಲ್ಲಾ ಗವರ್ನರ್ ಆಗಿ ಡಾ ಗೀತಾಪ್ರಕಾಶ ಎ. ಅಧಿಕಾರ ಸ್ವೀಕರಿಸಿ ಸೇವಾಯೋಜನೆಗಳ ಅನುಷ್ಠಾನಕ್ಕಾಗಿ ನಿಯೋಜಿಸಿದ ತನ್ನ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭವು ಇದೇ 16ರ ಭಾನುವಾರ ಬೆಳಗ್ಗೆ 10 ಗಂಟೆಗೆ ಜೆಎಲ್ ಅಡಿಟೋರಿಯಂನಲ್ಲಿ ವರ್ಚುವಲ್ ಆಗಿ ಝೂಮ್ ಮೂಲಕ ನಡೆಯಲಿದೆ ಸಂಪುಟ ಪದಗ್ರಹಣ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದರು.
ಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ಮುರುಗನ್ ಅವರು ಸಂಪುಟ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಿರುವರು. ಅಂತಾರಾಷ್ಟ್ರೀಯ ನಿರ್ದೇಶಕ ಎಂಡೋರ್ಸಿ ವಂಶಿಧರ ಬಾಬು, ಮಲ್ಟಿಪಲ್ 317 ರ ಚೆಯರ್ಮೆನ್ ನಾಗರಾಜ್ ವಿ ಬೈರಿ ಮುಖ್ಯ ಅತಿಥಿಗಳಾಗಿರುವರು. ಇದೇ ಸಂದರ್ಭ ’ಸೃಷ್ಟಿ’ ಲಯನ್ಸ್ ಜಿಲ್ಲಾ ಡೈರೆಕ್ಟರಿ ಬಿಡುಗಡೆಗೊಳ್ಳಲಿದೆ. ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ ಗಾಯತ್ರಿ ಜಿ ಪ್ರಕಾಶ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ನಿಕಟಪೂರ್ವ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್, ಪ್ರಥಮ ಉಪಗವರ್ನರ್ ವಸಂತಕುಮಾರ ಶೆಟ್ಟಿ, ದ್ವಿತೀಯ ಉಪಗವರ್ನರ್ ಸಂಜಿತ್ ಶೆಟ್ಟಿ ಭಾಗವಹಿಸಲಿದ್ದಾರೆ.
ಗವರ್ನರ್ ಡಾ. ಗೀತಾಪ್ರಕಾಶ್ ಮಾತನಾಡಿ ಜಿಲ್ಲಾ ಗವರ್ನರ್ ಅವರ ಜಿಲ್ಲಾ ಪ್ರೊಜೆಕ್ಟ್ ಆಗಿ ವಿಟ್ಲ ಒಕ್ಕೆತ್ತೂರು ಸಮೀಪ ವಿಶೇಷ ಚೇತನ ಮಕ್ಕಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ವಿಟ್ಲ ಲಯನ್ಸ್ ಸೇವಾ ಟ್ರಸ್ಟ್ ಮತ್ತು ವಿಟ್ಲ ಲಯನ್ಸ್ ಕ್ಲಬ್ ನಿಂದ ನಡೆಸುತ್ತಾ ಬಂದಿದ್ದ ’ಫಿಸಿಯೋಥೆರಪಿ’ ಮತ್ತು ಕಳೆದ ವರ್ಷ ಆರಂಭಿಸಿದ ’ಸ್ಪೀಚ್ ಥೆರಪಿ’ ಯನ್ನು ಜಿಲ್ಲಾ ಯೋಜನೆಯಾಗಿ ರೂಪಿಸಲು ಕಟ್ಟಡ ರಚನೆ ಈ ವರ್ಷದಲ್ಲಿ ಮಾಡಿ ವರ್ಷವಿಡೀ ಅವುಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸಂಪುಟ ಸಾರ್ವಜನಿಕ ಸಂಪರ್ಕಾಧಿಕಾರಿ ವಿಟ್ಲ ಮಂಗೇಶ ಭಟ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಉಪಸ್ಥಿತರಿದ್ದರು.

More articles

Latest article