



ಬೆಳ್ತಂಗಡಿ: ಆಫ್ರಿಕನ್ ಬಸವನ ಹುಳವು ವಿಶ್ವದ ಅತ್ಯಂತ ಹಾನಿಕಾರಕ ಭೂಮಿ ಬಸವನ ಕೀಟಗಳಲ್ಲಿ ಒಂದು. ಇಂತಹ ಕೀಟ ಬಗ್ಗೆ ಅದ್ಯಯನ ನಡೆಸಲು ಬೆಳ್ತಂಗಡಿಯ ತೋಟಕಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.
ಆಫ್ರಿಕನ್ ಬಸವನ ಹುಳವನ್ನು ಹೇಗೆ ಹತೋಟಿಗೆ ತರಬಹುದು ಹಾಗೂ ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡಲು ತೋಟಗಾರಿಕಾ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿಯ ಅಧಿಕಾರಿಗಳು ಆ. 14ರಂದು ಮಧ್ಯಾಹ್ನ 2.30 ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿಯಲ್ಲಿ ಮಾಹಿತಿಯನ್ನು ನೀಡಲಿದ್ದಾರೆ.
ರೈತ ಬಾಂಧವರು ಬಂದು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.






