ಬಂಟ್ವಾಳ: ಪಠ್ಯ ಪುಸ್ತಕಗಳು ವಿದ್ಯಾರ್ಥಿ ಗಳ ಸ್ವಯಂ ಕಲಿಕೆಗೆ ಪೂರಕವಾಗಲಿದೆ, ಶಿಕ್ಷಕರ ನಿರಂತರ ಸಂಪರ್ಕದೊಂದಿಗೆ ವಿದ್ಯಾರ್ಥಿ ಗಳು ಪಠ್ಯ ಪುಸ್ತಕ ಗಳ ಉಪಯೋಗದಿಂದ ಸ್ವಯಂಕಲಿಕೆಯನ್ನು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು.


ಅವರು ಸ.ಪ.ಪೂ.ಕಾಲೇಜು ವಾಮದಪದವು ಇಲ್ಲಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪಾಂಗಲ್ಪಾಡಿ ವಿಷ್ಣು ಮೂರ್ತಿ ದೇವಾಲಯದ ಪ್ರಾಂಗಣದಲ್ಲಿ ಪಠ್ಯ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು.
ವಾಮದಪದವು ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಅವರವರ ಜನವಸತಿ ಪ್ರದೇಶಕ್ಕನುಗುಣಸಾರವಾಗಿ ಮಾವಿನಕಟ್ಟೆ, ಪಿಲಿಮೊಗರು, ಪಾಂಗಲ್ಪಾಡಿ, ಕೊರಗಟ್ಟೆ, ಬಸ್ತಿಕೋಡಿ ಮೊದಲಾದ ಕಡೆಗಳಲ್ಲಿ ಊರಪ್ರಮುಖರ ನೇತ್ರತ್ವದಲ್ಲಿ ಪುಸ್ತಕ ವಿತರಿಸಲಾಯಿತು.
ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, , ಎಸ್.ಡಿ.ಎಂ.ಸಿ.ಸದಸ್ಯ ರು ಹಾಗೂ ಪ್ರೌಢ ಶಾಲಾ ವಿಭಾಗದ ಶಿಕ್ಷಕರ ಉಪಸ್ಥಿತಿಯಲ್ಲಿ ವಿತರಣೆ ನಡೆಸಲಾಯಿತು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here