



ಈ ಬಾರಿ ಮುಂಗಾರು ಬೆಳೆ ಸಮೀಕ್ಷೆಯನ್ನು ರೈತರೇ ಆಪ್ನಲ್ಲಿ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ೨೦೨೦-೨೧ ನೇ ಸಾಲಿನ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ರವರ ಮಾರ್ಪಡಿತ ಮೊಬೈಲ್ ಆಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ಖಾಸಗಿಯವರ ಸಹಕಾರದೊಂದಿಗೆ ಸಾದ್ಯವಾಗದಿದ್ದರೆ ಸರಕಾರದ ಸಿಬ್ಬಂದಿಗಳನ್ನು ಬಳಸಿಕೊಂಡು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಆಗಸ್ಟ್.೧೦ ರಿಂದ ಅಳವಡಿಸಲು ಅವಕಾಶ ಕಲ್ವಿಸಲಾಗಿದೆ.
ಮೊಬೈಲ್ ತಂತ್ರಾಂಶ ಮೂಲಕ ನಡೆಸುವ ಬೆಳೆ ಸಮೀಕ್ಷೆ ಆಧಾರದ ಮೇಲೆಯೇ ಕನಿಷ್ಟ ಬೆಂಬಲ ಬೆಲೆ ನಿಗದಿ, ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮಾ ಯೋಜನೆ, ಬೆಳೆ ಸಾಲ (ಅಡಿoಠಿಐoಚಿಟಿ) ತಾಲೂಕು ಹಂತದ ಬೆಳೆ ಪರಿಶೀಲನೆ, ಎನ್.ಡಿ.ಆರ್ ಎಫ್/ಎಸ್.ಡಿ.ಆರ್.ಎಫ್ ಅಡಿಯಲ್ಲಿ ಸಹಾಯಧನ ನೀಡಲು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧ ಪಡಿಸಲು ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ ಸಿದ್ಧಪಡಿಸಲು, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗುರುತಿಸಲು , ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ , ಕೃಷಿ ತೋಟಗಾರಿಕಾ ಬೆಳೆ ವಿಸ್ತೀರ್ಣ ಎಣಿಕಾ ಕಾರ್ಯದಲ್ಲಿ ದತ್ತಾಂಶವನ್ನು ಬಳಸಲಾಗುವುದು. ಆದ್ದರಿಂದ ತಾಲೂಕಿನ ರೈತರು ಆಗಸ್ಟ್.೧೦ ರಿಂದ ಆಗಸ್ಟ್.೨೪ರವರೆಗೆ ತಮ್ಮ ಜಮೀನಿನ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ಆಪ್ನಲ್ಲಿ ದಾಖಲಿಸಿ, ಆಪ್ಲೋಡ್ ಮಾಡಲು ಅವಶ್ಯ ಬೆಳೆ ಸಮೀಕ್ಷಾ ಆಪನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಈಚಿಡಿmeಡಿs ಅಡಿoಠಿ Suಡಿveಥಿ ೨೦೨೦-೨೧ ಂಠಿಠಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.






