ಸುಳ್ಯ : ರಸ್ತೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದಿದ್ದು, ಆ ರಸ್ತೆಯಾಗಿ ಹೋದ ಬೈಕ್ ಸವಾರನಿಗೆ ತಂತಿ ತಾಗಿ ವಿದ್ಯುತ್ ಪ್ರವಹಿಸಿ, ಬೈಕ್ ಸವಾರ ಸಜೀವ ದಹನಗೊಂಡ ಘಟನೆ ಸುಳ್ಯ ತಾಲೂಕಿನ ನಿಂತಿಕಲ್ಲಿನ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಇಂದು ಮುಂಜಾನೆ 5: 45 ರ ಸಮಯಕ್ಕೆ ನಡೆದಿದೆ ಎಂಬ ಮಾಹಿತಿ ಇದೆ.

ಮಂಡೆಕೋಲು ಗ್ರಾಮದ ಮೈತಡ್ಕ ತಿಮ್ಮಪ್ಪ ಗೌಡರ ಮಗ ಉಮೇಶ್ (45) ಸುಟ್ಟು ಕರಕಲಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಚಾಲಕ ಮತ್ತು ವಾಹನ ಎರಡೂ ಬೆಂಕಿಗಾಹುತಿಯಾಗಿದೆ ಎಂದು ವರದಿಯಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here