



ಬಂಟ್ವಾಳ: ಗಿರಾಕಿಯ ವೇಷದಲ್ಲಿ ಅಂಗಡಿ ಮಾಲಕನ ಗಮನ ಬೇರೆ ಕಡೆಗೆ ಸೆಳೆದು ದಿನಸಿ ಅಂಗಡಿಯಿಂದ ಕಳವು ಮಾಡಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕುದ್ದುಪದವು ಎಂಬಲ್ಲಿ ಶನಿವಾರ ಮಧ್ಯಾಹ್ನ ವೇಳೆ ನಡೆದಿದೆ.
ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿನ ಶ್ರೀಧರ್ ರೈ ಎಂಬವರ ದಿನಸಿ ಅಂಗಡಿಯಿಂದ ಸುಮಾರು 33 ಸಾವಿರ ರೂ. ಹಣವನ್ನು ಕಳ್ಳ ದೋಚಿಕೊಂಡು ಹೋಗಿದ್ದಾನೆ.
ಪಶು ಆಹಾರವನ್ನು ಕೇಳಿ ನಗದು 2 ಸಾವಿರ ರೂ ಹಣವನ್ನು ನೀಡಿದಾಗ ಚಿಲ್ಲರೆಗಾಗಿ ಅಲ್ಲೇ ಅಂಗಡಿ ಹಿಂಭಾಗದಲ್ಲಿರುವ ಮನೆಗೆ ಶ್ರೀಧರ್ ರೈ ಹೋದಾಗ ಅವರ ಪತ್ನಿಯಲ್ಲಿ ಆತ ನೀರು ಕೇಳಿ ಕುಡಿದಿದ್ದ. ಬಳಿಕ ಶ್ರೀಧರ್ ರೈ ಚಿಲ್ಲರೆ ನೀಡಿದಾಗ ಆತ ಚಿಲ್ಲರೆ ಪಡೆದುಕೊಂಡು ಪಶು ಆಹಾರವನ್ನು ಮತ್ತೆ ಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿದ್ದ.
ಆತ ತೆರಳಿದ ಬಳಿಕ ಡ್ರಾವರ್ ತೆಗೆದು ನೋಡಿದಾಗ ಅದರಲ್ಲಿ ಇದ್ದ 3 ಸಾವಿರ ರೂ. ಹಣ ಹಾಗೂ ಮನೆಯ ಕಪಾಟಿನಲ್ಲಿದ್ದ 30 ಸಾವಿರ ರೂ. ಕೂಡ ಆತ ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ವಿಟ್ಲ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.






