

ಬಂಟ್ವಾಳ: ತಾಲೂಕಿನ ಅನುದಾನ ರಹಿತ ಶಾಲೆಯ 40 ಶಿಕ್ಷಕರು ಹಾಗೂ 83 ಅಡುಗೆ ಸಿಬ್ಬಂದಿಗಳಿಗೆ ಸಹಾಯ ಧನವನ್ನು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಮೂಲಕ ಹಸ್ತಾಂತರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ ಜಿಲ್ಲಾ ಉಪನಿರ್ದೇಶಕ ಮಲ್ಲೇಸ್ವಾಮಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಾಲೂಕು ಸಂಪನ್ಮೂಲ ಕೇಂದ್ರದ ಮುಖ್ಯಸ್ಥ ರಾಧಾಕೃಷ್ಣ ಭಟ್, ಬಿ.ಆರ್.ಪಿ. ರಾಘವೇಂದ್ರ ಬಳ್ಳಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಸುಪಾರಿಡೆಂಟ್ ಹಷೇಂದ್ರ, ಬಂಟ್ವಾಳ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘ ಇದರ ಅಧ್ಯಕ್ಷ ಜೋಯಲ್ ಲೋಬೋ, ದ.ಕ. ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಸ್ಟಾನಿ ತಾವ್ರೋ, ತಾಲೂಕು ಸಂಘದ ಖಜಾಂಚಿ ಧನ್ರಾಜ್, ಉಪಾಧ್ಯಕ್ಷರಾದ ಹರಿಪ್ರಸಾದ್, ಜಯಪ್ರಕಾಶ್, ಸದಸ್ಯ ಭಾಸ್ಕರ್ ರಾವ್ ಉಪಸ್ಥಿತರಿದ್ದರು.








