ಬಂಟ್ವಾಳ: ಕಾಲಿನ ಬೆರಳಿನ ಮೂಲಕ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾನಾದ ಬಂಟ್ವಾಳದ ಕಂಚಿಕಾರ್ ಪೇಟೆ ನಿವಾಸಿ ಕೌಶಿಕ್ ಗೆ ಅಭಿನಂದನೆ ಸಲ್ಲಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್.
ಮುಂದಿನ ವಿದ್ಯಾಭ್ಯಾಸ ಕ್ಕೆ ನೆರವು
ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಗೆ ಮುಂದಿನ ವಿದ್ಯಾಭ್ಯಾಸ ಕ್ಕೆ ನೆರವು ನೀಡುವ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ನೀಡಿದ್ದಾರೆ.
ಅಭಿನಂದನೆ ಸಲ್ಲಿಸಿದ ವೇಳೆ ನೀನು ಯಾವ ವಿಷಯವನ್ನು ಪಿ.ಯು.ಸಿ.ಯಲ್ಲಿ ಆಯ್ಕೆ ಮಾಡಿಕೊಳ್ಳಲು ಇಚ್ಚಿಸುತ್ತಿ, ಮತ್ತು ಯಾವ ಕಾಲೇಜು ಆಯ್ಕೆ ಮಾಡುತ್ತಿ ಅದನ್ನು ಮಾಡಿಕೊಂಡು ಮುಂದಿನ ವಿದ್ಯಾಭ್ಯಾಸ ಮುಂದುವರಿಸು, ನೀನು ವಿದ್ಯಾಭ್ಯಾಸ ಮಾಡುವವರೆಗಿನ ಶಾಲಾ ಶುಲ್ಕವನ್ನು ತಾನು ಭರಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಅಭಿನಂದನೆ

ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆದು ರಾಜ್ಯದ ಶಿಕ್ಷಣ ಸಚಿವರ ಗಮನ ಸೆಳದುದಲ್ಲದೆ, ಕೌಶಿಕ್ ನಮಗೆ ಸ್ಫೂರ್ತಿ ಎಂದು ಟ್ವಿಟರ್ ಮೂಲಕವೂ ಅವರ ಅಭಿನಂದನೆ ಪಡೆದಿದ್ದ.
ಶಿಕ್ಷ ಸಚಿವ ಸುರೇಶ್ ಕುಮಾರ್ ಅವರು ಪೊಳಲಿ ಗೆ ಆಗಮಿಸಿದ ವೇಳೆ ಬಂಟ್ವಾಳ ಶಾಸಕರು ಕೌಶಿಕ್ ನನ್ನು ಪೊಳಲಿ ಗೆ ಬರಮಾಡಿಸಿ ಅವರಿಂದ ಅಭಿನಂದನೆ ಸಲ್ಲಿಸಿದ್ದರು.

ಬಂಟ್ವಾಳದ ಕಂಚಿಕಾರ್ ಪೇಟೆ ನಿವಾಸಿ ರಾಜೇಶ್ ಮತ್ತು ಜಲಜಾಕ್ಷಿ ಅವರ ಎರಡನೇ ಪುತ್ರ ಕೌಶಿಕ್ ಪಾಠದ ಜೊತೆಯಲ್ಲಿ ಎಲ್ಲ ಆಟೋಟ ಸ್ಪರ್ಧೆಯಲ್ಲಿ ಕೂಡ ಸೈ ಎನಿಸಿಕೊಂಡ ಬಹುಮುಖ ಪ್ರತಿಭೆ.
ಈತ ಈಜಬಲ್ಲ, ಸೈಕಲ್ ಸವಾರಿ ಮಾಡಬಲ್ಲ, ವಾಲಬಾಲ್,ಕ್ರಿಕೆಟ್ ಆಟ ಆಡಬಲ್ಲ , ಡ್ಯಾನ್ಸ್ , ಚಿತ್ರಕಲೆ ಹೀಗೆ ಎಲ್ಲದರಲ್ಲೂ ಮುಂದು.
ಪ್ರಸ್ತುತ ಕಲಿಕೆಯಲ್ಲಿ ಯೂ ಪ್ರಥಮ ಶ್ರೇಣಿಯ ಲ್ಲಿ ಪಾಸಾಗಿ ಬಂಟ್ವಾಳ ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದಾನೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here