



ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಬಂಟ್ವಾಳ ಘಟಕ ಹಾಗೂ ಪೆರಾಜೆ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಪೆರಾಜೆ ದ.ಕ. ಜಿ. ಪ. ಹಿ. ಪ್ರಾ. ಶಾಲಾ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ದ.ಕ. ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷ ಎಸ್.ಪಿ. ಚಂಗಪ್ಪ ಅವರು ಗಿಡ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಾಲಾ ಮೈದಾನದಲ್ಲಿಯು ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ವೇದಿಕೆಯ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ. ಸಿದ್ದಕಟ್ಟೆ, ಬಂಟ್ವಾಳ ಘಟಕದ ಅಧ್ಯಕ್ಷ ಸುರೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಮಾಜಿ ತಾ.ಪಂ. ಸದಸ್ಯರಾದ ಕುಶಲ ಎಂ. ಪೆರಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ಮೇಲ್ವಿಚಾರಕಿ ಶ್ವೇತಾ, ಯುವಕ ಮಂಡಲದ ಅಧ್ಯಕ್ಷ ದೀಪಕ್ ಪೆರಾಜೆ ವೇದಿಕೆಯಲ್ಲಿದ್ದರು.
ಬಂಟ್ವಾಳ ವಕೀಲರ ಸಂಘದ ಸದಸ್ಯರಾದ ಸತೀಶ್ ಬಿ., ಉಮಾಕರ ಬಂಗೇರ ಹಾಗೂ ಯುವಕ ಮಂಡಲ ಪೆರಾಜೆಯ ಸದಸ್ಯರು ಉಪಸ್ಥಿತರಿದ್ದರು. ಸಚಿನ್ ಎಂ. ಪೆರಾಜೆ ಸ್ವಾಗತಿಸಿದರು. ಪ್ರಶಾಂತ್ ಮಂಜೋಡಿ ವಂದಿಸಿದರು. ಲಕ್ಷ್ಮೀಶ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.






