



ಬಂಟ್ವಾಳ: ನಿವೃತ್ತ ಪೋಸ್ಟ್ ಮಾಸ್ಟರ್, ಹಿರಿಯ ಬಿಜೆಪಿ ಮುಖಂಡ, ಬಂಟ್ವಾಳ ತಾಲೂಕು ಪಿಲಿಮೊಗರು ಗ್ರಾಮದ ದಂಡೆ ನಿವಾಸಿ, ಕೃಷ್ಣ ಶೆಟ್ಟಿ ದಂಡೆ (86) ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕ, ಬೀಡಿ ಗುತ್ತಿಗೆದಾರರಾಗಿದ್ದ ಅವರು ಆರ್ಎಸ್ಎಸ್ ಕಾರ್ಯಕರ್ತರಾಗಿದ್ದರು.ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘ, ದಂಡೆ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾಗಿದ್ದರು. ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದರು. ಯಕ್ಷಗಾನ ಪೋಷಕರಾಗಿದ್ದ ಅವರು ಸ್ಥಳೀಯವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳದಾನಿಯಾಗಿ ಪ್ರೋತ್ಸಾಹಕರಾಗಿದ್ದರು.





