ಬೆಳ್ತಂಗಡಿ: ಮೂರು ತಿಂಗಳಿಗೂ ಮೀರಿದ ಲಾಕ್ ಡೌನಿಂದಾಗಿ ಯೋಜನಾ ಕಾರ್ಮಿಕರು ಅದರಲ್ಲೂ ವಿಶೇಷವಾಗಿ ಅಕ್ಷರ ದಾಸೋಹ ನೌಕರರ ಪಾಲಿಗೆ ಮರಣಾಂತಿಕ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಶಿವಕುಮಾರ್ ಎಸ್.ಎಂ. ಅವರು ಇಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಬಳಿ ನಡೆದ ಅಕ್ಷರ ದಾಸೋಹ ನೌಕರರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

2001-02 ರಲ್ಲಿ ಪ್ರಾರಂಭವಾದ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ದುಡಿಯುತ್ತಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಯಾವುದೇ ಪರಿಹಾರವಿಲ್ಲದೆ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿರುವ ಬಿಸಿಯೂಟ ನೌಕರರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಪ್ರಿಲ್, ಮೇ,ಜೂನ್ ಮತ್ತು ಜುಲೈ ತಿಂಗಳ ವೇತನ ನೀಡಬೇಕು, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಬದಲಾಗಿ ಎಲ್ಐಸಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಬಿಸಿಯೂಟ
ಕಾರ್ಮಿಕರನ್ನು ಪರಿಗಣಿಸಬೇಕು ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಐ.ಟಿ.ಯು ಬೆಳ್ತಂಗಡಿ ತಾಲ್ಲೂಕು ಕಾರ್ಯದರ್ಶಿ ವಸಂತ ನಡ, ಬಿಸಿ ಊಟ ನೌಕರರಿಗೆ ಕಳೆದ ಏಪ್ರಿಲ್ ತಿಂಗಳಿಂದ ಯಾವುದೇ ವೇತನ ಪಾವತಿ ಆಗಿರುವುದಿಲ್ಲ ಅಲ್ಲದೆ ಸರ್ಕಾರದ ಯಾವುದೇ ಪಾಕೇಜುಗಳು ಕಡಿಮೆ ವೇತನದಲ್ಲಿ ದುಡಿಯುವ ಈ ಮಹಿಳೆಯರಿಗೆ ನೀಡದ ಸರ್ಕರ ದ್ರೋಹ ಮಾಡಿದೆ ಎಂದರು.


ಅಕ್ಷರ ದಾಸೋಹ ನೌಕರರ ತಾಲ್ಲೂಕಿನ ಅಧ್ಯಕ್ಷರಾದ ಲಲಿತಾ ಮದ್ದಡ್ಕ ಮಾತನಾಡಿ ಮಾತೆ ಮಾತೆ ಎನ್ನುವ ಸರ್ಕಾರ ಲಕ್ಷಗಟ್ಟಲೆ ಅಕ್ಷರ ದಾಸೊಹ ನೌಕರಿಗೆ ಅನ್ವಯ ಮಾಡಿದೆ ಎಂದರು.

ಮಹಿಳಾ ನಾಯಕಿ ಸುಕನ್ಯಾ ಅವರು ಮಾತನಾಡಿ, ಕೇರಳ ರಾಜ್ಯದ ಮಾದರಿಯಲ್ಲಿ ಅಕ್ಷರ ದಾಸೋಹ ನೌಕರಿಗೆ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡಬೇಕು ಎಂದರು.

ನೌಕರರಿಗೆ 18,000/- ಮಾಸಿಕ ವೇತನ ನೀಡಬೇಕು, ಅಲ್ಲಿಯವರೆಗೆ ರೂ 5000 ನೀಡಬೇಕು ,ಅಕ್ಷರ ದಾಸೋಹ ಯೋಜನೆಗೆ ಕಡಿತ ಮಾಡಿರುವ ಅನುದಾನವನ್ನು ಕೇಂದ್ರ ಸರ್ಕಾರ ವಾಪಸ್ ನೀಡಬೇಕು , ನೌಕರರನ್ನು ಡಿ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು , ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿದಂತೆ 22 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಬೆಳ್ತಂಗಡಿ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಪಧಾದಿಕಾರಿಳಾದ ವನಿತಾ, ರೋಹಿಣಿ,ವಿಜಯ, ಗುಲಾಬಿ ರಮಣಿ, ಕಾರ್ಮಿಕ ಮುಖಂಡರುಗಳಾದ ಸುಧಾ ಕೆ.ರಾವ್, ಕುಸುಮಾ ಮಾಚಾರ್ ಕ್ರಷ್ಣ ನೆರಿಯ ಜುಬೇದಾ ಸುಜೀತ್ ಉಜಿರೆ, ಸುಹಾಸ್ ಅಡಿಗ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here