


ಬಂಟ್ವಾಳ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ಬಂಧಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯ ವಿಶ್ವನಾಥ ಮರ್ತಾಜೆ (63) ಬಂಧಿತ ಆರೋಪಿ.
ಸಜೀಪ ಮುನ್ನೂರು ಗ್ರಾಮದ ಶಾಂತಿನಗರ ಎಂಬಲ್ಲಿ ಶೇಂದಿ ಅಂಗಡಿ ಬಳಿ ಗಿರಾಕಿಗಳಿಗೆ ಮದ್ಯ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಸ್ಥಳಕ್ಕೆ ದಾಳಿ ನಡೆಸಿ ದಾಗ ಮಾರಾಟ ಮಾಡುವ ವ್ಯಕ್ತಿ ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಪಾಲಿಥಿನ್ ಚೀಲದಲ್ಲಿ ಮಾರಾಟ ಮಾಡುತ್ತಿದ್ದರು.
ಚೀಲದಲ್ಲಿ 90 ಮಿಲಿ ಲೋಟರ್ ನ 18 ಪೌಚ್ ಗಳು ಇದರ ಒಟ್ಟು ಮೌಲ್ಯ 600 ಹಾಗೂ ಪ್ರೀಸ್ಟೇಜ್ ಖಾಲಿ ಸ್ಯಾಚೇಟ್ 6 ಮತ್ತು ಮೈಸೂರು ಲ್ಯಾನ್ಸರ್ ನ 12 ಖಾಲಿ ಪೌಚ್ , ಎರಡು ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು ಇದರಲ್ಲಿ ಯಾವುದೇ ಮೌಲ್ಯಗಳಿರಲಿಲ್ಲ.
ಮಾರಾಟ ಮಾಡಿದ 190 ರನ್ನು ವಶಪಡಿಸಿಕೊಂಡಿದ್ದಾರೆ.





