


ಬಂಟ್ವಾಳ: ಆರ್.ಎಸ್.ಎಸ್. ಕಾರ್ಯಕರ್ತನ ಕೊಲೆ ಆರೋಪಿಯ ಬೈಕ್ ಅಪಘಾತಕ್ಕೊಳಗಾಗಿ ಸಣ್ಣಪುಟ್ಟ ಗಾಯಗಳಾಗಿ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶರೀಫ್ ಆಲಾಡಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ.
ಶರೀಫ್ ಆಲಾಡಿ ಬೈಕ್ ಅಪಘಾತದ ಬಳಿಕ ಅದೇ ಸಮಯದಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಸ್ಥಳೀಯ ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ಕೂಡಾ ನಡೆದಿದ್ದು, ಗಾಯಗೊಂಡ ಆತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಆರೋಪಿ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ತಂಡವೊಂದು ಆಗಮಿಸಿತ್ತು ಎಂಬ ಆರೋಪವನ್ನು ಶರೀಫ್ ಆಲಾಡಿ ಮಾಡಿದ್ದಾರೆ. ಕಾರಿನಲ್ಲಿ ಬಂದ ತಂಡಕ್ಕೆ ನವೀನ್ ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ಶರೀಫ್ ಸಹಚರರು ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯ ವಿವರ:
ಬೈಕ್ ಅಪಘಾತದಲ್ಲಿ ಗಾಯಗೊಂಡ ಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ಮೇಲೆ ಕೊಲೆಗೆ ಯತ್ನ ಎಂದು ಬಿಂಬಿಸಲು ಹೊರಟ ಸ್ವ ಹಿತಾಸಕ್ತಿ ಸಂಘಟನೆಗಳು ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿದೆ.
ಇಂದು ಮಧ್ಯಾಹ್ನ 12.30 ಗಂಟೆಗೆ ಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ತನ್ನ ಸ್ವಂತ ಬೈಕ್ ನಲ್ಲಿ ಮಸೀದಿಗೆ ತೆರಳುವ ಸಮಯ ಎದುರು ಬಂದ ಬೈಕ್ ಒಂದಕ್ಕೆ ಅಪಘಾತವಾಗಿದ್ದು, ಆ ಸಮಯ ಶರೀಫ್ ಮತ್ತು ಬೈಕ್ ನವರಿಗೆ ಗಲಾಟೆಯಾಗಿದ್ದು, ನಂತರ ಬೈಕ್ ನಲ್ಲಿ ಬಂದ ವ್ಯಕ್ತಿಗಳು ಅಲ್ಲಿಂದ ಹೋಗಿರುತ್ತಾರೆ.
ಇಂದು ಆಲಾಡಿಯಲ್ಲಿ ಸ್ಥಳೀಯರೊಬ್ಬರು ಮರಣ ಹೊಂದಿದ ಸಂಬಂಧ ಅಲ್ಲಿಯೇ ಓಡಾಡುತ್ತಿದ್ದ ಮತ್ತು ಮರಣ ಸಾಗಿಸಲು ಆಂಬ್ಯುಲೆನ್ಸ್ ವಾಹನವನ್ನು ತರುವ ಉದ್ದೇಶದಿಂದ ಅಲಾಡಿ ನಿವಾಸಿ ನವೀನ್ ಎಂಬ ಹುಡುಗ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಶರೀಫ್ ನ ಸಹಚರರು ಸಜೀಪ ಗ್ರಾಮದ ಆಲಾಡಿಯಲ್ಲಿ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಗಾಯಗೊಂಡ ನವೀನ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಂದು ಚಿಕ್ಕ ಅಪಘಾತವನ್ನು ಕೊಲೆ ಯತ್ನ ಎಂಬುವುದಾಗಿ ಬಿಂಬಿಸುತ್ತಿರುವ ಸಂಘಟನೆಯ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಆಲಾಡಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಮತ್ತು ಯಾವಾಗಲೂ ಜನ ಓಡಾಡುವ ರಸ್ತೆಯಲ್ಲಿ ಶರೀಫ್ ನಿಗೆ ಮತ್ತು ಇನ್ನೊಂದು ಬೈಕ್ ನವರಿಗೆ ಅಪಘಾತವಾಗಿ ಗಲಾಟೆಯಾದರು ಯಾರೋಬ್ಬರು ನೋಡಿರುವುದಿಲ್ಲ. ಮುಸ್ಲಿಂ ಏರಿಯಾದಲ್ಲಿ ಶರೀಫ್ ಮೇಲೆ ಕೊಲೆಗೆ ಯತ್ನ ಮಾಡಬಹುದಾ…??? ಇಲ್ಲವೇ ಇದೊಂದು ಕೃತಕವಾಗಿ ಸೃಷ್ಟಿ ಮಾಡಿದ ಅಪಘಾತವೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿವಾಗುತ್ತಿದೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಸತ್ಯಾಸತ್ಯತೆಯ ಬಗ್ಗೆ ತನಿಖೆ ಆರಂಬಿಸಿದ್ದಾರೆ.





