ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ತಾಲೂಕು ಪ್ರಖಂಡದ ವತಿಯಿಂದ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಪ್ರಯುಕ್ತ ಪ್ರಾರ್ಥನೆ, ಕರ ಸೇವಕರಿಗೆ ಸಮ್ಮಾನ ಹಾಗೂ ವಿಹಿಂ.ಪ., ಬಜರಂಗದಳ ನೂತನ ವಾಮದಪದವು ಘಟಕ ತಕ್ಷಶಿಲಾ ಇದರ ಉದ್ಘಾಟನೆ ಕಾರ್ಯಕ್ರಮ ವಾಮದಪದವು ಗಣೇಶ ಮಂದಿರದಲ್ಲಿ ಆ.೫ರಂದು ಜರಗಿತು.


ಉಡುಪಿ ಕ್ಷತ್ರಿಯ ಪೀಠ ಮಹಾ ಸಂಸ್ಥಾನದ ಶ್ರೀ ವಿಶ್ವಾಧಿರಾಜ ತೀರ್ಥ ಸ್ವಾಮೀಜಿ ಅವರು ನೂತನ ಘಟಕವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಕರ ಸೇವಕ, ವಿ.ಹಿಂ.ಪ. ಜಿಲ್ಲಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ ಅವರು ಸಂಘಟನೆಯ ಪ್ರಾಮುಖ್ಯತೆ, ಧ್ಯೇಯೊದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ವಿ.ಹಿ.ಪಂ.ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಬಜರಂಗದಳ ಸಂಚಾಲಕ ಶಿವ ಪ್ರಸಾದ್ ತುಂಬೆ, ಸಂತೋಷ್ ಕುಲಾಲ್, ಸ್ಥಳೀಯ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಗೋಪಾಲಕೃಷ್ಣ ಚೌಟ,ಕೆ.ಲಕ್ಷ್ಮೀ ನಾರಾಯಣ ಉಡುಪ, ಪುರುಷೋತ್ತಮ ಶೆಟ್ಟಿ, ಭೋಜರಾಜ ಶೆಟ್ಟಿ ಕೊರಗಟ್ಟೆ, ವಿಜಯ ರೈ, ಚಂದ್ರಶೇಖರ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಶಿವ ಪ್ರಸಾದ್ ಪೂಂಜ, ಶ್ಯಾಂ ಪ್ರಸಾದ್ ಪೂಂಜ, ಯಶೋಧರ ಶೆಟ್ಟಿ, ಸುಬ್ಬಣ್ಣ ಶಾಸ್ತ್ರಿ, ಗಣನಾಥ ಶೆಟ್ಟಿ ಕೆಮ್ಮಾರು, ಉಮೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ಸುಽರ್ ಶೆಟ್ಟಿ, ರತ್ನ ಕುಮಾರ ಚೌಟ, ಪ್ರಭಾಕರ ಪ್ರಭು, ಸಂದೇಶ್ ಶೆಟ್ಟಿ, ಸತೀಶ್ ಪೂಜಾರಿ ಹಲಕ್ಕೆ, ನವೀನ್ ಹೆಗ್ಡೆ, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ್ ಬಜ, ಅಶ್ವಥ್ ರಾವ್,ಕಾರ್ತಿಕ್ ಬಲ್ಲಾಳ್, ಶಂಕರ ಶೆಟ್ಟಿ ಬೆದ್ರಮಾರ್, ದಯಾನಂದ ಎರ್ಮೆನಾಡು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವಕರನ್ನು ಸಮ್ಮಾನಿಸಲಾಯಿತು.
ವಿ.ಹಿಂ.ಪ. ವಾಮದಪದವು ಘಟಕ ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here