ಬಂಟ್ವಾಳ: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಗಡಿಸ್ಥಳದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ರಸ್ತೆ ಅಪಘಾತಗಳು ಆಗುವ ಪ್ರದೇಶವಾಗಿ ಗೋಚರಿಸುತ್ತಿದೆ.
ಕಳೆದ ಕೆಲವು ತಿಂಗಳಲ್ಲಿ ಅನೇಕ ಅಪಘಾತ ನಡೆದಿದ್ದು , ಸ್ಪಾಟ್ ಡೆತ್ ಸಹಿತ ಅನೇಕ ಪ್ರಾಣ ಹಾನಿಯಾಗಿದೆ. ಜೊತೆಗೆ ಸುಮಾರು ಜನರು ಗಾಯಗೊಂಡಿದ್ದಾರೆ.

ಈಗಾಗಲೇ ಆ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನು ಇಡಲಾಗಿದೆ.
ಹೆದ್ದಾರಿ, ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಒಟ್ಟಾಗಿ ಅಲ್ಲಿ ರಸ್ತೆ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿದೆ.
ಅಪಘಾತ ತಡೆಯಲು ಆ ಪ್ರದೇಶದಲ್ಲಿ ಅಪಘಾತ ವಲಯದ ಬಗ್ಗೆ ಸೂಚನೆ, ಎಚ್ಚರಿಕೆ ಫಲಕಗಳನ್ನು ನಿರ್ಮಾಣ ಮಾಡುವುದು, ಅಪಘಾತ ವಲಯದ 50 ಮೀಟರ್ ವ್ಯಾಪ್ತಿಯಲ್ಲಿ ಸ್ಪೀಡ್ ಬ್ರೇಕರ್ ಹಂಪ್ ಗಳನ್ನು ನಿರ್ಮಾಣ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಕೊಳ್ಳುವುದು ಸೂಕ್ತ ಸಲಹೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳು ಗಮನಹರಿಸಬೇಕಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here