ಬಂಟ್ವಾಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿಪೂಜಾ ವಿಧಿವಿಧಾನಗಳನ್ನು ಮನೆಯಲ್ಲಿ ಟಿ‌.ವಿ.ಮೂಲಕ ವೀಕ್ಷಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು.
ಮಂದಿರದ ಭೂಮಿಪೂಜೆಯ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡ ಬಂಟ್ವಾಳ ಶಾಸಕರು.

ಅದಕ್ಕೂ ಮೊದಲು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮನ ಮಂದಿರ ನಿರ್ಮಾಣ ದ ಭೂಮಿ ಪೂಜೆ ನಿರ್ವಿಘ್ನವಾಗಿ ನಡೆಯಲಿ ಎಂದು ಪೂಜೆ ಸಲ್ಲಿಸಿ ಬಳಿಕ ಅಯೋಧ್ಯೆ ರಾಮ ಜನ್ಮ ಭೂಮಿಯ ಹೋರಾಟದ ಮುಂಚೂಣಿಯ ಲ್ಲಿದ್ದ ಹಿಂದೂ ಮುಖಂಡ ಆರ್.ಎಸ್.ಎಸ್.ಪ್ರಮುಖ ಕಲ್ಲಡ್ಕ ಡಾ|ಪ್ರಭಾಕರ ಭಟ್ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದು, ಅ ಬಳಿಕ ಯುವಮೋರ್ಚಾದ ವತಿಯಿಂದ ಬಿಸಿರೋಡಿನ ರಕ್ತೇಶ್ಚರಿ ದೇವಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ಖಾಸಗಿ ಕಾರ್ಯಕ್ರಮ ಗಳಲ್ಲೂ ಭಾಗವಹಸಿ ಬಳಿಕ ಶ್ರೀರಾಮಮಂದಿರದ ಭೂಮಿಪೂಜೆಯನ್ನು ಮನೆಯಲ್ಲಿಯೇ ಕುಳಿತು ಟಿ.ವಿ.ಮೂಲಕ ವೀಕ್ಷಿಸಿದರ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here