



ಬೆಳ್ತಂಗಡಿ: ಪರಿಷ್ಟ ವರ್ಗ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಲ್ಯಾಂಪ್ಸ್ (ನಿ) ದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಗೆ ಸೇರಿದ ರೆಂಕೆದ ಗುತ್ತು, ಆಶ್ರಯ ಕಾಲೋನಿಯಲ್ಲಿ ಖ್ಯಾತ ನ್ಯಾಯವಾದಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ್ ಅವರು ಲ್ಯಾಂಪ್ಸ್ ಸಹಕಾರಿ ಸಂಘದ ವತಿಯಿಂದ ಉಚಿತ ಸಸಿ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ ಉರುವಾಲು, ನಗರ ಪಂಚಾಯತ್ ಸದಸ್ಯರಾದ ರಜನಿ ಕುಡ್ವ, ಲೋಕೇಶ್ ,ಲ್ಯಾಂಪ್ಸ್ ನ ಸದಸ್ಯರಾದ ತಿಮ್ಮಪ್ಪ ನಾಯ್ಕ, ಪ್ರಸಾದ್, ಪ್ರಶಾಂತ್ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ಧೇಶಕ ಕರಿಯ ನಾಯ್ಕ ಧರ್ಮಸ್ಥಳ ಉಪಸ್ಥಿತಿತರಿದ್ದರು.
ಸಂಘದ ನಿರ್ಧೇಶಕ ಚೆನ್ನಕೇಶವ ಸ್ವಾಗತಿಸಿ, ಕಾರ್ಯದರ್ಶಿ ಹೀನಾ ಕುಮಾರ್ ವಂದಿಸಿದರು. ಕೇಶವ ಅಚ್ಚಿನಡ್ಕ ಮತ್ತು ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.





