ಅಯೋಧ್ಯೆ:  ಶ್ರೀರಾಮ ಜನ್ಮ ಭೂಮಿ ಪವಿತ್ರ ಜಾಗದಲ್ಲಿ ಇವತ್ತು ಐತಿಹಾಸಿಕವಾಗಿ ಜಗತ್ತಿನ ಅತೀ ಅದ್ಭುತವಾದ ಭವ್ಯ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೆರುತ್ತಿರುವುದು, ನಮ್ಮೆಲ್ಲರ ಸೌಭಾಗ್ಯ. ಈ ನಿರ್ಮಾಣ ಕಾರ್ಯ ಹೋರಾಟಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದು ಪರಿಷತ್ ನ ಕರೆಯಂತೆ ಪ್ರಾರಂಭದ 1990 ಮತ್ತು 1992 ರಲ್ಲಿ ಪ್ರಾಣದ ಹಂಗು ತೊರೆದು, ಕುಟುಂಬ ಸಂಸಾರವನ್ನು ಬಿಟ್ಟು ಅಯೋಧ್ಯೆಗೆ ತೆರಳಿರುವ ಶ್ರೀರಾಮ ಭಕ್ತ ಕರಸೇವಕರ ಪರಿಶ್ರಮವು 500 ಕ್ಕೂ ಹೆಚ್ಚು ವರ್ಷಗಳ ಇತಿಹಾಸದ ಸಮಸ್ಯೆಯ ಪರಿಹಾರಕ್ಕೆ ಇಂದಿಗೂ ಜೀವಂತ ಸಾಕ್ಷಿ.

ಇವತ್ತಿಗೆ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮಾಡುವುದರೊಂದಿಗೆ ಕರ ಸೇವಕರಿಗೆ ಮುಕ್ತಿ ಪ್ರಾಪ್ತಿಯಾದಂತಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಂಟ್ವಾಳ ತಾಲೂಕು ಭೌಧಿಕ್ ಪ್ರಮುಖ್ ಚಂದ್ರಶೇಖರ ಕೆಯಾಬೆ ಅಭಿಪ್ರಾಯ ಪಟ್ಟರು.

ಅವರು ಹಿಂದು ಜಾಗರಣ ವೇದಿಕೆ ಕರ್ಪೆ ಘಟಕ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ಪ್ರಯುಕ್ತ ಅಂಗವಾಗಿ ಕರ್ಪೆ ಶ್ರೀರಾಮಾಂಜನೆಯ ಮಂದಿರದಲ್ಲಿ ನಡೆದ ವಿಶೇಷ ಪೂಜೆ, ರಾಮ ಭಜನೆ ಸಂಕಿರ್ತನೆ ಹಾಗೂ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಕರಸೇವಕರಾಗಿ ತೆರಳಿರುವ ಶ್ರೀರಾಮ ಭಕ್ತ ಕರಸೇವಕನ್ನು ಸನ್ಮಾನಿಸಿ ಮಾತಾನಾಡಿದರು.
ಪ್ರಾಸ್ಥಾವಿಕವಾಗಿ ಮಾತಾಡಿದ ಹಿಂದು ಜಾಗರಣ ವೇದಿಕೆ ವಿಟ್ಲ ತಾ.ಸಂಪರ್ಕ ಪ್ರಮುಖ್ ಅರುಣ್ ಸಜೀಪ ಶ್ರೀರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಕರಾವಳಿ ಮುಂಚೂಣಿ ಪಾತ್ರ ವಹಿಸಿಕೊಂಡು, ಉಡುಪಿಯ ಪೇಜಾವರ ಸ್ವಾಮಿಜೀಗಳ ಪಾತ್ರವನ್ನು ಸ್ಮರಿಸುತ್ತಾ ಕರಸೇವಕರು ರಕ್ತವನ್ನು ಬೆವರಿನ ರೂಪದಲ್ಲಿ ಅರ್ಪಿಸಿದ ಪರಿಣಾಮ ಇವತ್ತು ರಾಮ ಮಂದಿರ ನಿರ್ಮಾಣಕ್ಕೆ ಸಹಕಾರಿ ಯಾಗಿದ್ದು ,ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ದೂರದೃಷ್ಟಿ ಚಿಂತನೆಯೇ ಮೂಲ ಪ್ರೇರಣೆಯಾಗಿದೆ ಎಂದರು.
ಸಿದ್ದಕಟ್ಟೆ ಪರಿಸರದಲ್ಲಿನ ಅಯೋಧ್ಯೆ ಕರಸೇವಕರಾದ ಗೋಪಾಲ ಗೌಡ ಕೊರ್ಯಾರು, ಓಬಯ ಗೌಡ ಮಂಚಕಲ್ಲು, ವಿಶ್ವನಾಥ ಶೆಟ್ಟಿಗಾರ್ ಸಂಗಬೆಟ್ಟು, ಯೋಗಿಶ್ ಶೆಟ್ಟಿಗಾರ್ ಉರಂಡಗೆ, ಸುಂದರ ಸಂಗಬೆಟ್ಟು, ಜನಾರ್ದನ ಗೌಡ ದೇವಸ, ವಾಸುದೇವ ಶೆಟ್ಟಿಗಾರ್ ಸಂಗಬೆಟ್ಟು ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿ.ಜಾ.ವೇ ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ, ಹಿಂದು ಯುವವಾಹಿನಿ ಜಿಲ್ಲಾ ಸಯೋಂಜಕ ಪ್ರಶಾಂತ್, ಹಿ.ಜಾ.ವೇ.ಕರ್ಪೆ ಘಟಕ ಅದ್ಯಕ್ಷ ನವೀನ ಪೂಜಾರಿ, ಶ್ರೀರಾಮಾಂಜನೆಯ ಮಂದಿರ ವ್ಯವಸ್ಥಾಪಕ ಡಾ| ರಾಮರಾಯ ಪ್ರಭು ದೋಟ, ಸ್ಥಳೀಯ ಬಿ.ಜೆ.ಪಿ. ಮುಖಂಡ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾ.ಪ.ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಉಪಸ್ಥಿತರಿದ್ದರು.
ಸಭೆಯಲ್ಲಿ ಸುಬ್ರಹ್ಮಣ್ಯ ಭಟ್ ದೋಟ, ಸಂದೇಶ್ ಶೆಟ್ಟಿ ಸಿದ್ದಕಟ್ಟೆ, ಮಾದವ ಶೆಟ್ಟಿಗಾರ್, ಉಮೇಶ್ ಗೌಡ ಮಂಚಕಲ್ಲು, ಹಿ.ಜಾ.ವೇ ಉಪಾಧ್ಯಕ್ಷ ರಂಜಿತ್ ಪೂವಳ,ಪ್ರದಾನ ಕಾರ್ಯದರ್ಶಿ ತೇಜಾಸ್ ಮರ್ದೊಟ್ಟು ಮತ್ತಿತರರು ಭಾಗವಹಿಸಿದ್ದರು.
ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here