



ಬಂಟ್ವಾಳ: ಆಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ದ ಭೂಮಿಪೂಜೆಯ ನಿರ್ವಿಘ್ನವಾಗಿ ನಡೆದ ಬಳಿಕ ಶ್ರೀರಾಮನ ಭವ್ಯ ಮಂದಿರ ಯಾವುದೇ ವಿಘವಿಲ್ಲದೆ ನಡೆಯಲಿ ಎಂಬ ಉದ್ದೇಶದಿಂದ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯಲ್ಲಿನ ಕಲ್ಲಡ್ಕ ಮಂಜನಗುಡ್ಟೆ ಕುರ್ಮಾನ್ ಅಣ್ಣಪ್ಪ ಪಂಜುರ್ಲಿ ದೈವದ ಮೂಲಸ್ಥಾನದಲ್ಲಿ ಸಂಜೆ ವೇಳೆ ದೈವಕ್ಕೆ ದೀಪ ಉರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಕಾ.ಕೃಷ್ಣಪ್ಪ ಕಲ್ಲಡ್ಕ, ದೈವದ ಪಾತ್ರಿ ಈಶ್ವರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಬಿಕೆ.ಅಣ್ಣುಪೂಜಾರಿ, ಉತ್ಸವ ಸಮಿತಿ ಅಧ್ಯಕ್ಷ ಮೋಹನ್ ನಾಯ್ಕ್, ಪ್ರಮುಖರಾದ ನವೀನ್ ಮಾಪಲ, ಸಂಜೀವ ಪೂಜಾರಿ ಮತ್ತು ಊರಿನ ಗಣ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.






