



ಬೆಳ್ತಂಗಡಿ: ಆಗಸ್ಟ್ 05 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಇರುವುದರಿಂದ ಸಾರ್ವಜನಿಕರು ಯಾವುದೇ ಕೋಮಿಗೆ ಅಥವಾ ಧರ್ಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವಾಟ್ಸಾಪ್ ಅಥವಾ ಫೇಸ್ ಬುಕ್ ನಲ್ಲಿ ಪ್ರಚೋದನಾಕಾರಿಯಾದ ಸಂದೇಶಗಳನ್ನು ಅಪ್ ಲೋಡ್ ಮಾಡುವುದಾಗಲಿ ಪರಸ್ಪರ ರವಾನಿಸುವುದಾಗಲಿ ಮಾಡಬಾರದು. ಯಾರಾದರು ಅಂತಹ ಸಂದೇಶಗಳನ್ನು ರವಾನಿಸಿದಲ್ಲಿ ಅಂಥವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಸಾರ್ವಜನಿಕರು ತಮ್ಮ ಮನೆಯಾಗಲಿ ಅಥವಾ ಇನ್ನಿತರ ಕಡೆಯಾಗಲಿ ಕಾರ್ಯಕ್ರಮದ ಸಂದರ್ಭದಲ್ಲಿ ಹೆಚ್ಚು ಜನ ಸೇರಬಾರದು ಮತ್ತು ಯಾವುದೇ ತರಹದ ಶಾಂತಿಯನ್ನು ಕದಡದಂತೆ ಸಾರ್ವಜನಿಕರು ಸಹಕರಿಸಬೇಕಾಗಿ ವೇಣೂರು ಪೋಲಿಸ್ ಠಾಣೆಯ ಲೋಲಾಕ್ಷ ಕೆ. ಪಿ. ತಿಳಿಸಿದ್ದಾರೆ.





