ಬೆಳ್ತಂಗಡಿ: ತಾಲೂಕಿನ ಶಿರ್ಲಾಲಿನ ಯುವವಾಹಿನಿ ಸಂಚಾಲನ ಸಮಿತಿ ಇದರ ನೂತನ ಪದಾದಿಕಾರಿಗಳ ತಂಡಕ್ಕೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸಂಚಾಲನಾ ಸಮಿತಿಯ ಗೌರವ ಸಲಹೆಗಾರ ದೇಜಪ್ಪ ಟೈಲರ್ ರವರ ಮನೆಯಲ್ಲಿ ಜರಗಿತು.
ಸಂಚಾಲನಾ ಸಮಿತಿಯ ಅಧ್ಯಕ್ಷ ಜ್ಞಾನೇಶ್ ಕುಮಾರ್ ಕಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಸ್ಥಿತರಿದ್ದ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ. ಪ್ರಸಾದ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಕೂಡ ಯುವವಾಹಿನಿ ಸಂಘಟನೆಯನ್ನು ಸೇರುವಂತೆ ಪ್ರೇರೇಪಿಸಬೇಕು ಮತ್ತು ಪ್ರಸ್ತುತ ಸಮಾಜದಲ್ಲಿ ಯುವಕರು ನಾರಾಯಣ ಗುರುಗಳ ತತ್ತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.ಹಾಗೂ ನೂತನ ತಂಡಕ್ಕೆ ಶುಭ ಹಾರೈಸಿದರು.
ನೂತನ ಅಧ್ಯಕ್ಷ ರಂಜಿತ್ ಪೂಜಾರಿ ಅಜಿರೋಳಿ ಇವರಿಗೆ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಘಟಕದ ಯುವವಾಹಿನಿ ನಿರ್ದೇಶಕ ಸದಾಶಿವ ಊರ, ಸಲಹೆಗಾರರಾದ ದಿನೇಶ್ ಕುಮಾರ್ ಕರ್ದೊಟ್ಟು, ಶಿವಾನಂದ ಶಿರ್ಲಾಲು, ರವಿ ಪೂಜಾರಿ ಬಾಕ್ಯರಡ್ಡ, ಶ್ರೀ ಗುರುನಾರಾಯಣ ಸೇವಾ ಸಂಘ ಶಿರ್ಲಾಲು ಇದರ ಕಾರ್ಯದರ್ಶಿ ಪ್ರವೀಣ್ ಪಾಲನೆ ಹಾಗೂ ಸಂಚಾಲನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶಶಿಕಾಂತ್  ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here