ಬಂಟ್ವಾಳ: ಮಾಜಿ ಮುಖ್ಯ ಸಚೇತಕ ಐವನ್ ಡಿ.ಸೋಜ ಅವರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸ್ವತಃ ಕ್ವಾರಂಟೈನ್ ಗೊಳಗಾಗಿದ್ದಾರೆ ಎಂದು ಅವರು ಈ ಬಗ್ಗೆ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಸ್ವಯಂ ಕ್ವಾರಂಟೈನ್ ಗೆ ಒಳಗಾಗಲು ನಿರ್ಧರಿಸಿರುವ ಕಾರಣ ಸಾರ್ವಜನಿಕ ಭೇಟಿ, ಇತರ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದೇನೆ. ದೂರವಾಣಿ ಮೂಲಕ ಸಂಪರ್ಕಕ್ಕೆ ಸದಾ ಲಭ್ಯವಿದ್ದೇನೆ ಎಂದು ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರು ಭೇಟಿಯ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕ ಐವನ್ ಡಿ.ಸೋಜ ಅವರು ಜೊತೆಯಲ್ಲಿದ್ದರು. ಅವರ ಜೊತೆಯಲ್ಲಿ ಕೆಲವು ಶಾಸಕರುಗಳು ಹಾಗೂ ಮಾಜಿ ಶಾಸಕರುಗಳು ಹಾಗೂ ಸಚಿವರುಗಳು ಇದ್ದರು.
ಅದೇ ದಿನ ಐವನ್ ಅವರ ಕೊರೊನಾ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವ್ ಎಂದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಜೊತೆಯಿದ್ದ ಮಾಜಿ ಸಚಿವ ರೈ ಅವರು ಸ್ವತಃ ಕ್ವಾರಂಟೈನ್ ಆಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here