ಬೆಳ್ತಂಗಡಿ: ದ.ಕ. ಹಾಗೂ ಉಡುಪಿ ಜಿಲ್ಲಾ
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಗುರುವಾಯನಕೆರೆ ಛಾಯಭವನದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಜರಗಿತು.


ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಕನಸುಗಳು ನೂರಿರಲಿ ಸಂರಕ್ಷಣೆ ಹೊಣೆ ನಮಗಿರಲಿ ಎಂದು ಸಂದೇಶವನ್ನು ಹೇಳುತ್ತ ಸೋದರತೆಯ ಸಂಭ್ರಮದ ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದರು.


ಸಂಘದ ಅಧ್ಯಕ್ಷ ಸುರೇಶ್ ಬಿ. ಕೌಡಂಗೆ, ಗೌರವಾಧ್ಯಕ್ಷ ಎನ್. ಎ. ಗೋಪಾಲ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಕಕ್ಕಿಂಜೆ, ಮಾಜಿ ಅಧ್ಯಕ್ಷರು, ಪಧಾದಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here