ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಮಂದಾರತಿ ಎಸ್. ಶೆಟ್ಟಿ, ಸಿದ್ದಕಟ್ಟೆ ಹಾಗೂ ಬೆಳ್ತಂಗಡಿ ಕ್ಷೇತ್ರ ಬಿ.ಜೆ.ಪಿ.ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯ ಪೂಜಾರಿ, ಕುಂಜಾಡಿ ನೇತೃತ್ವದಲ್ಲಿ ಸಂಗಬೆಟ್ಟು, ಸಿದ್ದಕಟ್ಟೆ, ಆರಂಬೋಡಿ, ವೇಣೂರು ವ್ಯಾಪ್ತಿಯಲ್ಲಿನ ಸರಕಾರಿ ಕಛೇರಿಗಳಿಗೆ ತೆರಳಿ ರಾಖಿಯನ್ನು ಕಟ್ಟುವ ಮೂಲಕ ಸಾಂಪ್ರದಾಯಿಕವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ  ಆಶಾ ಶೆಟ್ಟಿ, ಕುಕ್ಕಿಪಾಡಿ ಗ್ರಾ.ಪ. ಸದಸ್ಯರಾದ ಬೇಬಿ ಪೂಜಾರಿ, ಸುಜಾತ ಹಲಾಯಿ, ಮಹಿಳಾ ಕಾರ್ಯಕರ್ತೆ ಶಶಿಕಲಾ ಕಲ್ಪನೆ ಮತ್ತಿತರರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here