ಬಂಟ್ವಾಳ: ಮಂಗಳೂರು ವಿಭಾಗದ ಗ್ರಾಮ ವಿಕಾಸ ಸಮಿತಿ, ದ.ಕ. ಜಿಲ್ಲಾ ಸಹಕಾರ ಭಾರತಿ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇವರ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಉದ್ಯೋಗ ನೈಪುಣ್ಯ ತರಬೇತಿಯ 2ನೇ ಹಂತದ 4 ವಿಷಯಗಳ ಉದ್ಘಾಟನಾ ಸಮಾರಂಭ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಇಂದು ಬೆಳಿಗ್ಗೆ ಜರಗಿತು.
ಶಿಬಿರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಜನಸಂಖ್ಯೆ ಸಮಸ್ಯೆ ಅಲ್ಲ, ಮಾನವ ಸಂಪನ್ಮೂಲವನ್ನು ಕೌಶಲ್ಯಭರಿತವಾಗಿ ರೂಪಿಸಿಕೊಂಡಾಗ, ಸಮೃದ್ಧ ಅಭಿವೃದ್ಧಿಹೊಂದಿದ ದೇಶವನ್ನಾಗಿ ಮಾಡಬಹುದು. ವಿಶೇಷ ಆಲೋಚನೆಗಳು, ಮೌಲ್ಯಾಧಾರಿತ ಚಿಂತನೆಗಳು, ಅವಕಾಶಗಳ ಸದುಪಯೋಗ ತರಬೇತಿಯ ಮೂಲಕ ಶಿಬಿರಾರ್ಥಿಗಳದ್ದಾಗಲಿ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಭಾರತಿಯ ಕೊಂಕೋಡಿ ಪದ್ಮನಾಭ ಅವರು ಮಾತನಾಡಿ, ಸಂಕಷ್ಟದ ನಡುವೆಯೂ ಈ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿ ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಂಗಳೂರು ಗ್ರಾಮವಿಕಾಸ ಸಮಿತಿ ಸಹ ಸಂಯೋಜಕ ವೆಂಕಟರಮಣ ಹೊಳ್ಳ ಸ್ವಾಗತಿಸಿದರು. ಗೋಳ್ತಮಜಲು ಮಂಡಲ ಗ್ರಾಮ ವಿಕಾಸ ಪ್ರಮುಖ್ ಪುರುಷೋತ್ತಮ ವಂದಿಸಿದರು.
ಗೋಪಾಲ ಬಲ್ಯಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶ್ರೀ ಪ್ರಾರ್ಥನೆ ಮತ್ತು ಆಶಯಗೀತೆ ಹಾಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here