


ಬಂಟ್ವಾಳ: ಸಜೀಪ ವಲಯದ ನಾಲ್ಕು ಗ್ರಾಮದ ಸಜ್ಜನ ಸಮಸ್ತ ಹಿಂದೂ ಬಂಧುಗಳು ಆ. 5 ರಂದು ಬುಧವಾರ ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವರು ಶ್ರೀ ರಾಮಚಂದ್ರನ ಭವ್ಯ ಮಂದಿರದ ಭೂಮಿ ಪೂಜೆ ನೆರವೇರಲಿದ್ದು, ಸಂಭ್ರಮದ ಆ ಶುಭ ದಿನದಂದು ಸಜೀಪ ವಲಯದ ಸಮಸ್ತ ಹಿಂದೂ ಬಂಧುಗಳು ಮೀನು ಮಾಂಸದ ಆಹಾರ ಸೇವಿಸದೆ, ಸಸ್ಯಾಹಾರದಿಂದಿದ್ದು ಶ್ರದ್ಧಾ ಭಕ್ತಿಯಿಂದ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ಭೂಮಿ ಪೂಜೆಯಲ್ಲಿ ಮನಃಪೂರ್ವಕವಾಗಿ ಪಾಲ್ಗೊಳ್ಳಬೇಕಾಗಿ ಸಜೀಪ ವಲಯ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿನಂತಿಸುತ್ತಿದೆ.
ವಿ.ಸೂ: ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯ ಬುಧವಾರದ ಶುಭ ದಿನದಂದು ಸಜೀಪ ವಲಯದ ನಾಲ್ಕು ಗ್ರಾಮಗಳಲ್ಲೂ ಹಿಂದೂಗಳ ಮೀನು ಮತ್ತು ಕೋಳಿ ಮಾಂಸದ ವ್ಯಾಪಾರ ಇರುವುದಿಲ್ಲ.






