ಅಯೋದ್ಯೆ: ಐತಿಹಾಸಿಕ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಹಿಂದೂಗಳ ಬಹು ವರ್ಷಗಳ ಕನಸು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಇದಕ್ಕಾಗಿ ಆಗಸ್ಟ್ 5 ಭೂಮಿ ಪೂಜೆ ನೆರವೇರಲಿದೆ. ಅಂದು ನಡೆಯುವ ಭೂಮಿ ಪೂಜೆಗೆ ರಾಜ್ಯದಿಂದ ಕೇವಲ ಐವರನ್ನು ಮಾತ್ರ ಆಹ್ವಾನಿಸಲಾಗಿದೆ. ಈ ಪೈಕಿ ಇಬ್ಬರು ಕರಾವಳಿಯ ಧಾರ್ಮಿಕ ಮುಖಂಡರಾಗಿದ್ದಾರೆ.
ಕೊರೋನಾ ಕಾರಣಕ್ಕೆ ಕಾರ್ಯಕ್ರಮಕ್ಕೆ ಒಟ್ಟು 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ರಾಜ್ಯದಿಂದ ರಾಮ ಮಂದಿರ ನಿರ್ಮಾಣ ಟ್ರಸ್ಟಿ ಗಳಲ್ಲಿ ಓರ್ವರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರಿಗೆ ಅಹ್ವಾನ ನೀಡಲಾಗಿದೆ.
ಇದಲ್ಲದೆ ಶೃಂಗೇರಿ ಮಠ, ಆದಿಚುಂಚನಗಿರಿ ಶ್ರೀಗಳಿಗೆ ಹಾಗೂ ಸುತ್ತೂರು ಮಠಾಧೀಶರಿಗೆ ಆಹ್ವಾನ ಇದೆ. ರಾಮಮಂದಿರಕ್ಕೆ 1989 ರಲ್ಲಿ ಶಿಲಾನ್ಯಾಸ ನಡೆದಿತ್ತು. ಈಗ ನಡೆಯುತ್ತಿರುವುದು ಭೂಮಿಪೂಜೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಲಗಳು ತಿಳಿಸಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here