



ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇಂದು ನಗರ ಪಂಚಾಯತ್ ಸಹಕಾರದೊಂದಿಗೆ N.D.R.F ಸಿಬ್ಬಂದಿಯಿಂದ ತರಬೇತಿ ಪಡೆದ 60 ಸ್ವಯಂಸೇವಕರು ನಗರ ಪಂಚಾಯತ್ ವ್ಯಾಪ್ತಿಯ ಕಿಂಡಿಅಣೆಕಟ್ಟುಗೆ ಸಿಲುಕಿಕೊಂಡಿದ್ದಬೃಹತ್ ಮರಗಳನ್ನು ಹಾಗೂ ಕಸಗಳನ್ನು ತೆರವುಗೊಳಿಸಿದರು.
ಕಾರ್ಯಕ್ರಮವನ್ನು S.K.D.R.D.P ನಿರ್ದೇಶಕರಾದ L.H ಮಂಜುನಾಥ್ ಅವರು ಉದ್ಘಾಟಿಸಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತ್ ಸದಸ್ಯರಾದ ಶರತ್ ಕುಮಾರ್, ಜಯನಂದ ಗೌಡ, ಅಂಬರೀಷ್ ಕಲ್ಲಗುಡ್ಡೆ ಉಪಸ್ಥಿತರಿದ್ದರು.
ಈ ಕಾರ್ಯಾಚರಣೆಯಲ್ಲಿ ಯೋಜನಾಧಿಕಾರಿ ಜಯಕರ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯ ಶರತ್ ಕುಮಾರ್, ಲಾಯಿಲ ಗ್ರಾಮ ಪಂಚಾಯತ್ 67 ನೇ ಬೂತ್ ಅಧ್ಯಕ್ಷ ಅರವಿಂದ್ ಶೆಟ್ಟಿ, ಕಾರ್ಯದರ್ಶಿ ಗಣೇಶ್ ರಾಘವೇಂದ್ರನಗರ, ಸ್ವಯಂಸೇವಕರೊಂದಿಗೆ ಭಾಗವಹಿಸಿದರು.






