ವಿಶಾಖಪಟ್ಟಣಂ: ಇಲ್ಲಿನ ಹಡಗುಗಟ್ಟೆಯಲ್ಲಿ ಹೊಸದಾಗಿ ಅಳವಡಿಸಿದ್ದ ಬೃಹತ್​ ಕ್ರೇನ್​ ಕುಸಿದು 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಬೃಹತ್​ ಕ್ರೇನ್​ ಅನ್ನು ಸರಿಯಾಗಿ ನಿಲ್ಲಿಸಿರುವ ಬಗ್ಗೆ ಮತ್ತು ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದುನ್ನು ಖಚಿಪಡಿಸಿಕೊಳ್ಳಲು ಪರೀಕ್ಷೆ ಮಾಡುವ ಸಂದರ್ಭದಲ್ಲಿ ಅದು ಭಾರಿ ಸದ್ದಿನೊಂದಿಗೆ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.

ಸುಮಾರು  20 ಕಾರ್ಮಿಕರು ಕ್ರೇನ್​ನ ಪರೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕ್ರೇನ್​ ಕುಸಿಯಿತು. ಕೆಲವರು ಓಡಿ ಹೋಗಿ ಅಪಾಯದಿಂದ ಪಾರಾದರು. ಕೆಲವರಿಗೆ ಗಾಯಗಳಾಗಿವೆ. ಕ್ರೇನ್​ನ ಅವಶೇಷದಡಿ ಸಿಲುಕಿಕೊಂಡು 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕ್ರೇನ್ ನಡಿ ಸಿಲುಕಿದ್ದ ಹಲವಾರು ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈವರೆಗೆ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

 

 

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here