



ಬೆಳ್ತಂಗಡಿ: ಪಡಂಗಡಿಯ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ದೇವರ ಹುಂಡಿಯಲ್ಲಿರುವ ಹಣವನ್ನು ಕಳುವು ಮಾಡಿರುವ ಘಟನೆ ನಡೆದಿದ್ದು ಕೇವಲ ಎರಡೇ ದಿನದಲ್ಲಿ ಕಳ್ಳನು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ ಘಟನೆ ನಡೆದಿದೆ.
ಬರಾಯ ನಿವಾಸಿ ಶ್ರೀಧರ (36) ದೇವರ ಹಣ ಕದ್ದು ಸಿಕ್ಕಿಬಿದ್ದಿರುವ ಕಳ್ಳ.
ದೇವರ ಹಣ ಕಳ್ಳತನ ಆಗಿರುವ ವಿಷಯ ತಿಳಿದ ಕೂಡಲೇ ದೇವಾಲಯದ ಆಡಳಿತ ಮಂಡಳಿ ಹಾಗು ಊರವರು ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ದಿನಬೆಳಗಾಗೋ ಮುಂಚೆಯೇ ಕಳ್ಳ ದೇವಾಲಯದ ಎದುರು ಕ್ಷಮೆ ಯಾಚಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.






