



ಬಂಟ್ವಾಳ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಆಶಯದಂತೆ ರಾಷ್ಟ್ರೀಯ ಬಿ.ಜೆ.ಪಿ. ಅದ್ಯಕ್ಷ ಜೆ.ಪಿ. ನಡ್ದಾರವರ ನಿರ್ದೇಶನ ಮೇರೆಗೆ ರಾಜ್ಯ ಬಿ.ಜೆ.ಪಿ.ಅದ್ಯಕ್ಷ, ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯ ಪ್ರಕಾರ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ.ಅದ್ಯಕ್ಷ ದೇವಪ್ಪ ಪೂಜಾರಿ ನೇತೃತ್ವದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಯವರ ಮಾರ್ಗದರ್ಶನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರತಿ ಬೂತ್ ಮಟ್ಟದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆದೊಂದಿಗೆ ನಾಡಿನ ಸುರಕ್ಷಿತದ ಕಡೆಗೆ ಬಿ.ಜೆ.ಪಿ. ಸಾಗುತ್ತಿದೆ ಎಂದು ಕ್ಷೇತ್ರ ಬಿ.ಜೆ.ಪಿ. ಕಾರ್ಯದರ್ಶಿ ಹಾಗೂ ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಅದ್ಯಕ್ಷ ಸೀತರಾಮ ಪೂಜಾರಿ ಅಭಿಪ್ರಾಯ ಪಟ್ಟರು.
ಅವರು ಕ್ಷೇತ್ರ ಬಿ.ಜೆ.ಪಿ. ಸೂಚನೆಯ ಮೇರೆಗೆ ಸಂಗಬೆಟ್ಟು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಸಂಖ್ಯೆ 1 ಮತ್ತು 2 ರ ಕರ್ಪೆ ಗ್ರಾಮದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.
ಕರ್ಪೆ ಬೂತ್ ನಂಬರ್ 1 ರ ವತಿಯಿಂದ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ, ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಬೂತ್ 2 ರಲ್ಲಿ ಬೂತ್ ಅದ್ಯಕ್ಷ ನವೀನ ಪೂಜಾರಿ ಸಸಿ ನೆಟ್ಟರು.
ಬೂತ್ ಕಾರ್ಯದರ್ಶಿಗಳಾದ ಹರೀಶ್ ಪೂಜಾರಿ ಪಾದೆ, ಹರೀ ಪೂಜಾರಿ ಶೆಟ್ಟಿಬೆಟ್ಟು, ಉಮೇಶ್ ಗೌಡ ಮಂಚಕಲ್ಲು, ಮತ್ತಿತರ ಬಿ.ಜೆ.ಪಿ.ಕಾರ್ಯಕರ್ತರು ಭಾಗವಹಿಸಿದ್ದರು.






