



ಬಂಟ್ವಾಳ: ಪುದು ಮಂಡಲ ಪಂಚಾಯತ್ ಮಾಜಿ ಸದಸ್ಯ, ಸಾಮಾಜಿಕ ಸೇವಾಕರ್ತ, ಮಾರಿಪಳ್ಳ ನಿವಾಸಿ ಎಂ. ಮೋನಪ್ಪ ಅಮೀನ್ (88) ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು.
ಮೃತರು ಆರ್.ಕೆ. ಲೈಟಿಂಗ್ಸ್ ಮತ್ತು ಸೌಂಡ್ ಮಾಲಕರು, ಗಣೇಶ್ ಬೀಡಿ ಗುತ್ತಿಗೆದಾರರಾಗಿದ್ದು. ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ನಿರ್ದೇಶಕರು, ಹಿಂದೂ ಧಾರ್ಮಿಕ ಸೇವಾ ಸಮಿತಿ, ಗಣೇಶೋತ್ಸವ ಸಮಿತಿ ಸದಸ್ಯರಾಗಿದ್ದರು.
ಮೃತರು ಪತ್ನಿ , ಮೂವರು ಪುತ್ರರನ್ನು ಅಗಲಿದ್ದಾರೆ.






