ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ. ಯುವ ಮೋರ್ಚಾದ ನೂತನ ಪದಾಧಿಕಾರಿಗಳ ಘೋಷಣೆ ಪ್ರಥಮ ಕಾರ್‍ಯಕಾರಣಿ ಸಭೆ ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅಧ್ಯಕ್ಷತೆಯಲ್ಲಿ ಜರಗಿತು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ  ಗುರುದತ್ತ್ ನಾಯಕ್ ಕಾರ್ಯಕ್ರಮ ಉದ್ಫಾಟಿಸಿ, ಮಾತನಾಡಿ ಯುವ ಮೋರ್ಚಾ ಕಾರ್‍ಯಕರ್ತರು ಅಪೇಕ್ಷೆ ರಹಿತವಾಗಿ ಮತ್ತು ಪ್ರಭುದ್ಧತೆಯಿಂದ ಕೆಲಸ ಮಾಡಿದಾಗ ಪಕ್ಷ ಬಲಿಷ್ಠವಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.


ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ಮಾತಾನಾಡಿ, ಯುವ ಮೋರ್ಚಾದ ಕಾರ್ಯಕರ್ತರು ಪಕ್ಷದ ತತ್ವ ಸಿದ್ದಾಂತದ ಆಧಾರದಲ್ಲಿ, ಹಿರಿಯರ ಮಾರ್ಗದರ್ಶನದಲ್ಲಿ ಬೂತ್ ಮಟ್ಟದಲ್ಲಿಯುವ ಮೋರ್ಚಾದ ತಂಡ ರಚಿಸಬೇಕು.ಹಿರಿಯರು ಪಕ್ಷವನ್ನು ಕಟ್ಟಿ ಬೆಳೆಸಿದರು.ನಾವೂ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಬೇಕು.ನೂರು ವರ್ಷಗಳ ಅಪೇಕ್ಷೆ ನಮ್ಮ ಕಣ್ಣ ಮುಂದಿದೆ ಅದೆಲ್ಲವೂ ನನಸಾಗುವ ಸಂದರ್ಭ ಒದಗಿದೆ.ಆ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರ.ಕಾರ್‍ಯದರ್ಶಿ ರಾಮ್‌ದಾಸ್ ಬಂಟ್ವಾಳ,  ಜಿಲ್ಲಾ ಪ್ರಮುಖರಾದ ಸತೀಶ್ ಕುಂಪಲ, ಸಂದೇಶ್ ಶೆಟ್ಟಿ, ಸಹಜ್ ರೈ, ಸುದರ್ಶನ್ ಬಜ, ಸುಜಿತ್ ಕಂಬಳಪದವು, ಕ್ಷೇತ್ರ ಪ್ರ.ಕಾರ್‍ಯದರ್ಶಿ ಡೊಂಬಯ್ಯ ಅರಳ, ವಜ್ರನಾಥ ಕಲ್ಲಡ್ಕ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here