



ವಿಟ್ಲ: ಕಳೆದ ನವೆಂಬರ್ ತಿಂಗಳಿಂದ ಹೊಸ ಕಟ್ಟಡ ಪರವಾನಗಿ ನೀಡಿಲ್ಲ. ತಾಂತ್ರಿಕ ದೋಷಗಳಿಂದ ಪ್ರಾಕಾರದಿಂದ ಎಲ್ಲಾ ಕಡತ ತಿರಸ್ಕಾರವಾದರೆ ಜನರ ಗತಿಯೇನು..? ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಪಟ್ಟಣ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಭೆಗೆ ಅಕಾರಿಗಳು ಹಾಗೂ ಬಹುತೇಕ ಸದಸ್ಯರೇ ಹಾಜರಾಗಿಲ್ಲ ಎಂದು ಸದಸ್ಯ ಅಬ್ದುಲ್ ರಹಿಮಾನ್ ಹಸೈನಾರ್ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ವಿಟ್ಲ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ದಮಯಂತಿ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಾನಾ ಆಗ್ರಹಗಳು ಕೇಳಿ ಬಂದವು. ಕರೊನಾ ಜಾಗೃತಿ ಸಮಿತಿ ಮೂಲಕ ಕರೊನಾ ಪಾಸಿಟಿವ್ ಬಂದ ಪ್ರದೇಶದ ಆಸುಪಾಸಿನ ಮನೆಯವರನ್ನು ಮಾತಾಡಿಸಿ ಮಾಹಿತಿ ನೀಡಿ ಭಯ ಹೋಗಿಸುವ ಕೆಲಸ ನಡೆಸಬೇಕು ಎಂದು ನಿಕಟಪೂರ್ವ ಅಧ್ಯಕ್ಷ ಅರುಣ್ ವಿಟ್ಲ ಹೇಳಿದರು.
ಮುಂದಿನ ತಿಂಗಳಲ್ಲಿ ವಿಶೇಷ ಸಭೆ ನಡೆಸಿ ಪ್ರಾಕಾರದ ಅಕಾರಿಗಳಿಂದ ಸ್ಥಳೀಯ ಇಂಜಿನಿಯರ್ಗಳಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗುವುದು. ಸದಸ್ಯರ ವಿಚಾರ ಅವರಿಗೆ ಬಿಟ್ಟದ್ದು, ಸಭೆಗೆ ಅಕಾರಿಗಳು ಬರುವ ಬಗ್ಗೆ ಭರವಸೆ ನೀಡಿದ ಕಾರಣ ಸಭೆ ಇಡಲಾಗಿದೆ. ಕೋರಂ ಇರುವ ಕಾರಣ ಸಭೆ ನಡೆಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಹೇಳಿದರು.
ಪುತ್ತೂರು ಶಾಸಕರ ನೇತೃತ್ವದಲ್ಲಿ ಕರೊನಾ ಮುನ್ನೆಚ್ಚರಿಕೆಯ ದೃಷ್ಠಿಯಿಂದ ಆಯುರ್ವೇದ ಮಾತ್ರೆ ಹಂಚುವ ಕಾರ್ಯ ನಡೆಯುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರಿಗೂ ಆಯುರ್ವೇದ ಮಾತ್ರೆ ಹಂಚುವ ಕಾರ್ಯ ಮಾಡಬೇಕು ಎಂದು ಅಶೋಕ್ ಕುಮಾರ್ ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಲೋಕನಾಥ ಶೆಟ್ಟಿ, ಸುನೀತಾ ಕೋಟ್ಯಾನ್, ರಾಮದಾಸ ಶೆಣೈ, ಸಂದ್ಯಾಮೋಹನ್, ಲತಾವೇಣಿ, ಪಟ್ಟಣ ಪಂಚಾಯಿತಿ ಮುಖ್ಯಾಕಾರಿ ಮಾಲಿನಿ ಉಪಸ್ಥಿತರಿದ್ದರು.
ಒಂದೇ ಪಕ್ಷದ ಸದಸ್ಯರೊಳಗಿನ ಶೀತಲಸಮರ ಗೈರುಹಾಜರಿಗೆ ಕಾರಣ..?
ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 12 ಹಾಗೂ ಕಾಂಗ್ರೆಸ್ ಬೆಂಬಲಿತ 6 ಸೇರಿ ಒಟ್ಟು 18 ಚುನಾಯಿತ ಪ್ರತಿನಿಗಳಿದ್ದಾರೆ. 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಸುಮಾರು 15 ನಿಮಿಷಗಳ ಕಾಲ ತಡವಾಗಿ ಆರಂಭವಾಗಿತ್ತು. ಆದರೂ ಬಿಜೆಪಿ ಬೆಂಬಲಿತ ಉಪಾಧ್ಯಕ್ಷ ಹಾಗೂ ಸ್ಥಾಯೀ ಸಮಿತಿ ಅಧ್ಯಕ್ಷೆ ಸಹಿತ 8 ಮಂದಿ ಸಭೆಗೆ ಗೈರುಹಾಜರಾಗಿದ್ದರು. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಸೇರಿ 5 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಆಂತರಿಕ ಸಮಸ್ಯೆ ಹಾಗೂ ಪಟ್ಟಣ ಪಂಚಾಯಿತಿಯ ಆಡಳಿತ ಕಾರ್ಯವೈಖರಿಯ ಬಗ್ಗೆ ಏಕತಾನತೆ ಇರದ ಕಾರಣ ಸಭೆಗೆ ಆಗಮಸಿಲ್ಲ ಎನ್ನಲಾಗಿದೆ.






