ನಾವ್ಯಾರೂ ಏನೂ ಹೇಳಲಿಲ್ಲ ಅಂದ್ರ ನೀ ಹುಚ್ಚರಂಗನs ಇರತಿ
ಹೇಳಿದ್ದು ಸರಿಯಾಗಿ ಕೇಳಿಸಿಗೊಂಡ್ರೂ ಬೇಕಂತ ಸುಮ್ಮನs ಇರತಿ

ಗೆರಿ ಹೊಡದ ಕೂಡ್ಲೇ ಹೆಂಡ ಕುಡದ ಮಂಗ್ಯಾನಂಗ ಹಾರ್ಯಾಡತಿ
ಗೆರಿ ಹೊಡಿಯೂದಕಿಂತ ಮೊದಲ ಸಂಪನ್ನನಂಗ ಸುಮ್ಮನs ಇರತಿ

ಕತ್ತಲದಾಗ ಕೊಡಿ ಹಿಡೀಬ್ಯಾಡೋ ಅಂದ್ರ ದುರಗುಟ್ಟಿ ನೋಡತಿ
ಜೋರ್ ಮಳಿಯಾಗ ಮೈ ತೋಯಿಸಿಗೊಂಡ್ರೂ ಸುಮ್ಮನs ಇರತಿ

ಕಿಸೇದಾಗ ರೊಕ್ಕ ಇರೂತನಾ ಅವನೌನ ಫುಲ್ ಚೈನಿ ಹೊಡೀತಿ
ದುಡದ ಗಳಿಸಲೇ ಅಂದ್ರ ಕೆಟ್ಮಾರಿ ಮಾಡ್ಕೊಂಡು ಸುಮ್ಮನs ಇರತಿ

ಯಾರ್ಯಾರದೋ ನೆಳ್ಳಾಗ ಉಳ್ಯಾಡೀದ್ರ ನೀನು ಪಲ್ಟಿ ಹೊಡೀತಿ
ನಿನ್ ಕಾಲ ಮ್ಯಾಲೆ ನಿಂದ್ರು ಅಂದ್ರೂ ಸಿರಿ ನೀ ಸುಮ್ಮನs ಇರತಿ

ನೀ.ಶ್ರೀಶೈಲ ಹುಲ್ಲೂರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here