ಬಂಟ್ವಾಳ: ಗೋಹಂತಕರೇ ನಿಮ್ಮ ದುಷ್ರ್ಕತ್ಯವನ್ನು ನಿಲ್ಲಿಸಿ , ಪೋಲೀಸರೇ ಗೋಹಂತಕರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಿ ಎಂದು ಬಂಟ್ವಾಳ ಬಿ.ಜೆ.ಪಿ.ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವ್ಯಾಹತವಾಗಿ ಗೋಕಳ್ಳತನಗಳು ನಡೆಯುತ್ತಿದ್ದ ಬಗ್ಗೆ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಗೋ ಕಳ್ಳರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಕಾನೂನು ಬಾಹಿರ ಚಟುವಟಿಕೆಯಾದ ಅಕ್ರಮ ಗೋವುಗಳ ಕಳ್ಳತನಕ್ಕೆ ಪೋಲೀಸರು ಕಡಿವಾಣ ಹಾಕುವಂತೆಯೂ ವಿನಂತಿ ಮಾಡಿದ್ದಾರೆ.

 

ಕೃಷಿ ಕುಟುಂಬ ಅಧಾರಿತ ಜಿಲ್ಲೆಯ ಜನರ ಮನೆಗಳಿಂದ ತಲವಾರು ತೋರಿಸಿ ಗೋವುಗಳನ್ನು ಕಳ್ಳತನ ಮಾಡುವ ಬಗ್ಗೆ ವಿಪರೀತ ನೋವಾಗುತ್ತಿದೆ. ಗೋವುಗಳ ಮೂಲಕ ಕೃಷಿ ಜೊತೆಯಲ್ಲಿ ಜೀವನ ಸಾಗಿಸುವ ಕೃಷಿಕನ ಮನೆಯ ಹಟ್ಟಿಯಿಂದ ನಿರಂತರವಾಗಿ ಜಿಲ್ಲೆಯಲ್ಲಿ ಗೋವುಗಳ ಕಳ್ಳತನ ನಡೆಯುತ್ತಿರುವುದು ವಿಷಾದನೀಯ ಇದನ್ನು ಯುವಮೋರ್ಚಾ ಖಂಡಿಸುತ್ತದೆ, ಮತ್ತು ಅಂತವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತದೆ ಎಂದು ಅವರು ಅವರು ಹೇಳಿದ್ದಲ್ಲದೆ, ಅಕ್ರಮ ಗೋಕಳ್ಳತನಕ್ಕೆ ಕಡಿವಾಣ ಹಾಕಲು ನಮಗೂ ಗೊತ್ತಿದೆ, ಆದರೆ ಅದಕ್ಕೆ ಅವಕಾಶ ನೀಡಬಾರದು ಎಂದು ಅವರು ವಿನಂತಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here