



ವಿಟ್ಲ: ವಿಟ್ಲ ಕಸಬಾ ಗ್ರಾಮದ ಉಕ್ಕುಡ ದರ್ಬೆ ಎಂಬಲ್ಲಿ ಮನೆಯೊಳಗಡೆ ಗ್ಯಾಸ್ ಸಿಲಿಂಡರ್ನಲ್ಲಿ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹತ್ತಿಕೊಂಡಿದ್ದು, ಮನೆಮಂದಿ ಮಾತ್ರ ಯಾವುದೇ ಗಾಯಗೊಳ್ಳದೇ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಮನೆ ಹಾನಿಗೊಂಡಿದೆ.
ವಿಟ್ಲ ಕಸಬಾ ಉಕ್ಕುಡ ದರ್ಬೆ ನಿವಾಸಿ ಯೂಸುಫ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಯೂಸುಫ್ ಅವರ ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದ್ದು, ಇಂಡೇನ್ ಕಂಪೆನಿಗೆ ಸೇರಿದ ಹೊಸ ಸಿಲಿಂಡರ್ ಅಳವಡಿಸಲು ಸಿಲಿಂಡರ್ನ ಮುಚ್ಚಳ ತೆರೆಯುತ್ತಿದ್ದಂತೆ ಸೋರಿಕೆಯಾಗಿದೆ. ಮನೆಯಲ್ಲಿ ಯೂಸುಫ್ ಅವರ ಪತ್ನಿ, ಮಗಳು, ಮೊಮ್ಮಕ್ಕಳು ಇರುವಾಗಲೇ ಈ ಘಟನೆ ಸಂಭವಿಸಿದೆ. ತಕ್ಷಣವೇ ಸ್ಥಳೀಯರು ಕಾರ್ಯಪ್ರವೃತ್ತರಾಗಿ ಮನೆಮಂದಿಯನ್ನು ಹೊರಗಡೆ ಕಳುಹಿಸಿದ್ದಾರೆ. ಮನೆಯ ಎರಡು ಕೋಣೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸ್ಥಳೀಯರು ಬೆಂಕಿ ಆರಿಸಿದ್ದಾರೆ. ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನಿತರ ವಿದ್ಯುತ್ ಉಪಕರಣಗಳು ಕೂಡಾ ಸುಟ್ಟು ಹೋಗಿದೆ. ಸ್ಥಳಕ್ಕೆ ವಿಟ್ಲ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





