ಹರಿಯಾಣ: ಫ್ರಾನ್ಸ್‌ನಿಂದ ಇಂದು ಐದು ರಾಫೆನ್‌‌‌‌‌ ಯುದ್ದ ವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆ ನಿಲ್ದಾಣಕ್ಕೆ ಆಗಮಿಸುವ ಮುನ್ನ ನಿಲ್ದಾಣದಲ್ಲಿ ಅಧಿಕಾರಿಗಳು ಭದ್ರತೆ ಬಿಗಿಗೊಳಿಸಿದ್ದಾರೆ. ಅಂಬಾಲಾ ವಾಯುನೆಲೆ ನಿಲ್ದಾಣಕ್ಕೆ ಐದು ಯುದ್ದ ವಿಮಾನಗಳು ಬಂದಿಳಿಯುವ ಸಂದರ್ಭ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣವನ್ನು ನಿಷೇಧಿಸಿದ್ದಾರೆ. ಅದಲ್ಲದೇ ವಾಯುನೆಲೆಯ 3 ಕಿ.ಮೀ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್‌‌ ಹಾರಿಸುವುದನ್ನು ಕೂಡಾ ಅಂಬಾಲಾ ಜಿಲ್ಲಾಡಳಿತ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಬಾಲಾದಲ್ಲಿ ಭದ್ರತೆಯ ಕ್ರಮವಾಗಿ ನಿನ್ನೆಯಿಂದ ಸೆಕ್ಷನ್‌ 144 ಅನ್ನು ಜಾರಿಗೆ ತರಲಾಗಿದೆ. ನಾಲ್ಕು ಅಥವಾ ಹೆಚ್ಚು ಜನರು ಒಟ್ಟುಗೂಡಿಸುವುದನ್ನು ಕೂಡ ನಿಷೇಧಿಸಲಾಗಿದ್ದು, ವಾಯುನೆಲೆಯ ಪಕ್ಕದ ಗ್ರಾಮಗಳಲ್ಲಿ ಧುಲ್ಕೋಟ್, ಬಲದೇವ್ ನಗರ, ಗಾರ್ನಾಲಾ ಮತ್ತು ಪಂಜಖೋರಾದಲ್ಲಿ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಶೋಕ್ ಶರ್ಮಾ ಆದೇಶದಲ್ಲಿ ತಿಳಿಸಿದ್ದಾರೆ.
ಯುದ್ದ ವಿಮಾನಗಳು ಸೋಮವಾರ ಫ್ರಾನ್ಸ್‌ನಿಂದ ಹೊರಟಿದ್ದು, ಬುಧವಾರ ವಾಯುಪಡೆಯ ನಿಲ್ದಾಣಕ್ಕೆ ಆಗಮಿಸಲಿದೆ. ಯುದ್ದ ವಿಮಾನವು 7,000 ಕಿ.ಮೀ ಹಾರಾಟ ನಡೆಸಿ ಆಗಸದಲ್ಲಿಯೇ ಗಾಳಿ ತುಂಬಿಸಿ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ತಂಗಿತ್ತು. ಮೂರು ಸಿಂಗಲ್-ಸೀಟರ್ ಮತ್ತು ಎರಡು ಅವಳಿ ಆಸನಗಳ ವಿಮಾನ ಒಳಗೊಂಡಿದೆ ಎಂದು ಐಎಎಫ್ ಅಧಿಕಾರಿ ತಿಳಿಸಿದ್ದಾರೆ.
ರಫೇಲ್ ಯುದ್ದ ವಿಮಾನಗಳನ್ನು ಸ್ವಾಗತಿಸಲು ಇಂದು ಸಂಜೆ 7 ರಿಂದ 7: 30 ರ ನಡುವೆ ಜನರು ತಮ್ಮ ಮನೆಗಳಲ್ಲಿ ಮೇಣದ ಬತ್ತಿಗಳನ್ನು ಹಚ್ಚಬೇಕು ಎಂದು ಬಿಜೆಪಿಯ ಅಂಬಾಲಾ ಸಿಟಿ ಶಾಸಕ ಅಸೀಮ್ ಗೋಯಲ್ ಮನವಿ ಮಾಡಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಐಎಎಫ್‌ನ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ಭಾರತವು 59,000 ಕೋಟಿ ರೂ.ಗಳ ಒಪ್ಪಂದದಡಿಯಲ್ಲಿ 36 ರಫೇಲ್ ಯುದ್ದ ವಿಮಾನಗಳ ಖರೀದಿಗೆ ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ರಫೇಲ್ ಜೆಟ್‌ಗಳ ಮೊದಲ ಸ್ಕ್ವಾಡ್ರನ್ ಅಂಬಾಲಾ ವಾಯುನೆಲೆಯಲ್ಲಿ ನಿಲ್ಲಲಿದೆ. ಐದು ರಾಫೇಲ್‌ಗಳನ್ನು ಬುಧವಾರ ಐಎಎಫ್‌ಗೆ ಸೇರಿಸಲು ನಿರ್ಧರಿಸಲಾಗಿದ್ದರೂ, ನಂತರ ಔಪಚಾರಿಕ ಪ್ರಚೋದನಾ ಸಮಾರಂಭವನ್ನು ನಡೆಸಲಾಗುವುದು. 1948ರಲ್ಲಿ ಅಂಬಾಲಾ ವಾಯುನೆಲೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ವಾಯುನೆಲೆ ಹರಿಯಾಣದ ಅಂಬಾಲಾದ ಪೂರ್ವ ಭಾಗದಲ್ಲಿದೆ ಮತ್ತು ಇದನ್ನು ಮಿಲಿಟರಿ ಮತ್ತು ಸರ್ಕಾರಿ ವಿಮಾನಗಳಿಗಾಗಿ ಬಳಸಲಾಗುತ್ತದೆ. ಕಳೆದ ವರ್ಷ ಫೆಬ್ರವರಿಯಲ್ಲಿಮಿರೇಜ್‌ ಯುದ್ದ ವಿಮಾನವನ್ನು ಪಾಕಿಸ್ತಾನದ ಬಾಲಾಕೋಟ್‌‌ನಲ್ಲಿ ಪುಲ್ವಾಮಾ ದಾಳಿಯ ಬಳಿಕ ಉಪಯೋಗಿಸಲಾಗಿತ್ತು.
ಈ ವಾಯುನೆಲೆಯಲ್ಲಿ ಜಾಗ್ವೌರ್ ಯುದ್ಧ ವಿಮಾನದ ಎರಡು ಸ್ಕ್ವಾಡ್ರನ್‌‌ಗಳು ಹಾಗೂ ಮಿಗ್-21 ಬಿಸೊನ್‌‌ನ ಒಂದು ಸ್ಕ್ವಾಡ್ರನ್‌‌ಗಳಿವೆ. ಈ ಏರ್‌ಫೋರ್ಸ್‌‌ ಮಾರ್ಶಲ್‌‌ ಅರ್ಜನ್‌‌ ಸಿಂಗ್‌ ವಾಯುನೆಲೆಯ ಮೊದಲ ಕಮಾಂಡರ್‌ ಆಗಿದ್ದರು ಎಂಬ ಮಾಹಿತಿ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here