



ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದ ಪಂಬಾಜೆ ಮನೆಯ ರಾಜಿತ್ ಎಂಬ 22 ವರ್ಷದ ಯುವಕ ಮಂಗಳೂರಿನ ತನ್ನ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಮಾನಾಥ ರೈ ಮತ್ತು ಲೀಲಾಂಜಲಿ ದಂಪತಿ ಪುತ್ರ, ಮೃತಪಟ್ಟ ಯುವಕ ರಾಜಿತ್ (22) ಮಂಗಳೂರಿನಲ್ಲಿ ಹೊಟೇಲ್ ಮ್ಯಾನೆಜ್ಮೆಂಟ್ ಕೋರ್ಸ್ ಮಾಡುತಿದ್ದ.
ಪ್ರತಿಭಾವಂತನಾಗಿದ್ದ ಈತ, ಯತ್ನ ಎಂಬ ಕಿರುಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದ. ಅದಲ್ಲದೇ ನಟನೆ, ನಿರೂಪಣೆ, ನೃತ್ಯ ಹೀಗೆ ಎಲ್ಲಾ ಚಟುವಟಿಕೆಯಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳುತಿದ್ದ ಎಂದು ತಿಳಿದು ಬಂದಿದೆ.





