


ಬಂಟ್ವಾಳ: ಕೋವಿಡ್ -19 ನ ಭಯದ ವಾತವರಣದ ನಡುವೆಯೂ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಅವರು ಆಕ್ರಮ ದನ ಸಾಗಾಟದ ವಿರುದ್ಧ ನಿರಂತರ ಕಾರ್ಯಚರಣೆ ನಡೆಸುತ್ತಿದ್ದಾರೆ. ಪ್ರತಿ ನಿತ್ಯ ಅಕ್ರಮ ಗೋ ಸಾಗಾಟದ ಪ್ರಕರಣಗಳನ್ನು ಬೇದಿಸುತ್ತಲೇ ಇದ್ದಾರೆ.
ಸೋಮವಾರ ರಾತ್ರಿಯೂ ದಾಳಿ ನಡೆಸಿದ ಎಸ್.ಐ. ಅವಿನಾಶ್ ನೇತೃತ್ವದ ತಂಡ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಟ ಮಾಡುತ್ತಿದ್ದ ಕಾರು ಮತ್ತು ಒಂದು ದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಮಾರ್ನಬೈಲು ಎಂಬಲ್ಲಿ ಒಮ್ನಿ ಕಾರೊಂದು ವೇಗವಾಗಿ ಬರುತ್ತಿದ್ದು ಪೋಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ನಂದವಾರ ರಸ್ತೆಯ ಮೂಲಕ ವೇಗವಾಗಿ ಕಾರು ಮುಂದೆ ಹೋಗಿದೆ. ಪೋಲೀಸರು ವಾಹನವನ್ನು ಬೆನ್ನಟ್ಟಿಕೊಂಡು ಹೋದಾಗ ನಂದಾವರ ಎಂಬಲ್ಲಿ ಅಂಗಡಿಯೊಂದಕ್ಕೆ ಕಾರು ಡಿಕ್ಕಿ ಹೊಡೆದು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದಾರೆ.
ವಾಹನವನ್ನು ಪರಿಶೀಲಿಸಿದಾಗ ವಾಹನದೊಳಗೆ ಒಂದು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು. ವಾಹನ ಹಾಗೂ ದನವನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎ.ಎಸ್.ಐ.ಕುಂಜ್ಞ, ಸಿಬ್ಬಂದಿಗಳಾದ ಸುಜು, ಕೃಷ್ಣ ಕುಲಾಲ್, ಹಾಲೇಶ್, ಚಾಲಕ ವಿಜಯ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





